ಜೆಸಿಎಂ ಪರವಾಗಿ ಒಕ್ಕಲಿಗ ಮುಖಂಡರ ಪ್ರಚಾರ

05TMK_JCM_Bukkapatana1
Published on

ಚಿಕ್ಕನಾಯಕನಹಳ್ಳಿ: ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಪರವಾಗಿ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ನೇತೃತ್ವದಲ್ಲಿ ಶುಕ್ರವಾರ ಕೂಡ ಪ್ರಚಾರ ಮುಂದುವರಿಯಿತು.

ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಹಾಗೂ ಎಂ.ಚಿದಾನAದ ಗೌಡ ಕೂಡ ಪ್ರಚಾರಕ್ಕೆ ಸಾಥ್ ನೀಡಿದ್ದು ಬುಕ್ಕಾಪಟ್ಟಣ ಹೋಬಳಿಯ ಶಾಗದಡು, ರಂಗನಹಳ್ಳಿ, ಮಂಗನಹಳ್ಳಿ, ಕಿಲಾರದಹಳ್ಳಿ ಸಾಕ್ಷಿಹಳ್ಳಿ ಮತ್ತಿತರರ ಕಡೆಗಳಲ್ಲಿ ಮನೆಮನೆ ಪ್ರಚಾರ ನಡೆಸಿದರು.

ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮತನಾಡಿ, ಜೆ.ಸಿ.ಮಾಧುಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿಯೂ ಕಾಣಿಸುತ್ತಿವೆ, ಸಂಸದೀಯ ಪಟುವಾಗಿ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೆಸರು ತಂದಿದ್ದಾರೆ ಇಂತಹ ನಾಯಕನನ್ನು ಮತ್ತೊಮ್ಮೆ ಆಯ್ಕೆ ಮಾಡಿಕೊಳ್ಳುವುದು ಕ್ಷೇತ್ರಕ್ಕೂ ಶೋಭೆ ತರಲಿದೆ ಎಂದರು.

ಮಾಧುಸ್ವಾಮಿ ಅವರಂತಹ ನಾಯಕರು ವಿಧಾನಸಭೆಯಲ್ಲಿ ಇರುವುದು ಇಂದಿನ ರಾಜಕೀಯ ಕಾಲಘಟ್ಟದಲ್ಲಿ ಅಗತ್ಯವಾಗಿದ್ದು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಜನರು ಅತೀ ಹೆಚ್ಚು ಬಹುಮತದಿಂದ ಆಯ್ಕೆಮಾಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ರಾಜ್ಯದ ಪ್ರಮುಖ ಖಾತೆಯ ಸಚಿವರಾಗಿದ್ದರೂ ಹಳ್ಳಿಯಲ್ಲಿಯೇ ಉಳಿದಿರುವ ಆದರ್ಶ ರಾಜಕಾರಣಿ ಜೆಸಿಎಂ ಮತ್ತೊಮ್ಮೆ ಗೆದ್ದು ಬರಲು ಎಲ್ಲರೂ ಸಹಕಾರ ನೀಡಬೇಕು ಎಂದರು.

ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ ಕೂಡ ಬುಕ್ಕಾಪಟ್ಟಣ ಹೋಬಳಿಯ ಮಾಳಿಗೆ ಹಟ್ಟಿ, ಮೇಣಿಗನಹಟ್ಟಿ, ಬಂಗಾರಿ ಗೌಡನಹಟ್ಟಿ, ಕ್ಯಾತ ದೇವರಹಟ್ಟಿಗಳಲ್ಲಿ ಜೆಸಿಎಂ ಪರವಾಗಿ ಪ್ರಚಾರ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net