

ಕಾರ್ಕಳ: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ವಲಯ ಸಮ್ಮೇಳನದಲ್ಲಿ ವಲಯ 15ರ ವ್ಯಾಪ್ತಿಯ ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿಯನ್ನು ಜೆಸಿಐ ಬೆಳ್ಮಣ್ ಘಟಕ ಪಡೆದುಕೊಂಡಿದೆ.
ವಲಯ 15ರ ವ್ಯಾಪ್ತಿಯಲ್ಲಿ 70ಕ್ಕಿಂತ ಅಧಿಕ ಕ್ರಿಯಾಶೀಲ ಘಟಕಗಳಿದ್ದು ಪ್ರದೀಪ್ ಶೆಟ್ಟಿ ನೇತೃತ್ವದ ಜೆಸಿಐ ಬೆಳ್ಮಣ್ ಸಂಸ್ಥೆಯು 2025ರ ವರ್ಷದಲ್ಲಿ ಮಾಡಿದ ಅತ್ಯುತ್ತಮ ಕಾರ್ಯಕ್ರಮಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಅತ್ಯುತ್ತಮ ವ್ಯಕ್ತಿತ್ವ ವಿಕಸನ ವಿನ್ನರ್, ವೀರೇಂದ್ರ ಆರ್.ಕೆ. ಅವರಿಗೆ ಅತ್ಯುತ್ತಮ ಕಾರ್ಯದರ್ಶಿ ರನ್ನರ್ ಪ್ರಶಸ್ತಿ, ನಾಗೇಶ್ ಆಚಾರ್ಯ ಅವರಿಗೆ ಅತ್ಯುತ್ತಮ ನವ ಜೆಸಿಐ ಸದಸ್ಯ ವಿನ್ನರ್, ಸೌಜನ್ಯಾ ಸತೀಶ್ ಕೋಟ್ಯಾನ್ ಅವರಿಗೆ ಅತ್ಯುತ್ತಮ ಮಹಿಳಾ ಜೆಸಿಐ ಸದಸ್ಯೆ ರನ್ನರ್ ಪ್ರಶಸ್ತಿಗಳು ದೊರೆತಿವೆ.
ಮಂಗಳೂರಿನಲ್ಲಿ ನಡೆದ ಕಹಳೆ ಹೆಸರಿನ ವಲಯದ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ವಲಯಾಧ್ಯಕ್ಷ ಅಭಿಲಾಷ್ ಬಿ.ಎ. ಹಸ್ತಾಂತರಿಸಿದರು. ವಲಯ ಉಪಾಧ್ಯಕ್ಷ ಪ್ರಶಾಂತ್ ಆಚಾರ್ಯ ವರ್ಣಬೆಟ್ಟು, ವಲಯದ ಮೊದಲ ಮಹಿಳೆ ಶೀಲಾ ಮತ್ತು ಜೆಸಿಐ ಬೆಳ್ಮಣ್ ಪೂರ್ವಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.