

ಶಿರ್ವ: ವಿಶ್ವ ಆಘಾತ ದಿನದ ಅಂಗವಾಗಿ ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಪಠ್ಯೇತರ ಟಕವು ಭಾರತೀಯ ಶಸ್ತ್ರ ಚಿಕಿತ್ಸಕರ ಸಂದ ಸಹಯೋಗದೊಂದಿಗೆ ರಸ್ತೆ ಸಂಚಾರ ಅಪಘಾತಗಳು ಮತ್ತು ಆಘಾತ ಜಾಗೃತಿ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಿತ್ತು.
ಮಣಿಪಾಲ ಕೆಎಂಸಿ ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಮತ್ತು ಕೆಎಸ್ಸಿಎಎಸ್ಐ ಅಧ್ಯಕ್ಷ ಡಾ.ಕೆ ರಾಜಗೋಪಾಲ್ ಶೆಣೈ ರಸ್ತೆ ಸಂಚಾರ ಅಪಘಾತಗಳ ಬಗ್ಗೆ ವಾಹಿತಿ ನೀಡಿದರು. ಉಡುಪಿಯ ಸವಾಲೋಚಕ ಶಸ್ತ್ರಚಿಕಿತ್ಸಕ ಡಾ.ವೈ.ಸುದರ್ಶನ್ ರಾವ್ ಅಜಾಗರೂಕ ಚಾಲನೆಯ ದುಷ್ಪರಿಣಾಮಗಳ ಬಗ್ಗೆ ವಾಹಿತಿ ನೀಡಿದರು. ಉಡುಪಿಯ ಮೂಳೆ ಶಸ್ತ್ರಚಿಕಿತ್ಸಕ ಡಾ.ಸುರೇಶ್ ಶೆಣೈ ಸಿಪಿಆರ್ ಕುರಿತು ಪ್ರಾತ್ಯಕ್ಷಿಕೆ ಮತ್ತು ತುರ್ತು ಸಂದರ್ಭಗಳಲ್ಲಿ ಜೀವಗಳನ್ನು ಉಳಿಸುವಲ್ಲಿ ತಕ್ಷಣದ ಪ್ರತಿಕ್ರಿಯೆಯ ಮಹತ್ವದ ಬಗ್ಗೆ ತಿಳಿಸಿದರು.
ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಧಾಕೃಷ್ಣ ಎಸ್.ಐತಾಳ್, ಡೀನ್ಗಳಾದ ಡಾ.ನಾಗರಾಜ್ ಭಟ್, ಡಾ.ಸುದರ್ಶನ್ ರಾವ್ ಉಪಸ್ಥಿತರಿದ್ದರು.