ಅಧ್ಯಕ್ಷರಾಗಿ ಜಯಶ್ರೀ ಸ್ವಾಮಿ ಆಯ್ಕೆ

ಅಧ್ಯಕ್ಷರಾಗಿ ಜಯಶ್ರೀ ಸ್ವಾಮಿ ಆಯ್ಕೆ
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಜಯಶ್ರೀ ಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಸುನೀತಾ ಮಂಜು ಅವಿರೋಧವಾಗಿ ಆಯ್ಕೆಯಾದರು.

ತೆರವಾಗಿದ್ದ ಸ್ಥಾನಗಳಿಗೆ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಜಯಶ್ರೀ ಸ್ವಾಮಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸುನೀತಾ ಮಂಜು ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಹಾರಂಗಿ ಇಲಾಖೆಯ ಇಂಜಿನಿಯರ್ ರಂಗಯ್ಯ ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಹಿನ್ನಲೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಸಿ.ಪಿ ಸುರೇಶ್, ಸಿ.ಕೆ ವೆಂಕಟೇಶ್, ಸಿ.ಎಸ್. ಗಣೇಶ್, ಎಚ್.ಎಸ್. ದೇವೇಗೌಡ, ಧರಣೇಶ್, ಶಶಿಕಲಾ, ಶೋಭಾ, ಸರಸ್ವತಿ, ಮೀನಾಕ್ಷಿ , ಪ್ರೇಮಮ್ಮ, ಪಿಡಿಒ ಕೆ.ಕೆ ಶ್ರೀದೇವಿ, ಕಾರ್ಯದರ್ಶಿ ಕುಮಾರ್, ಸಿಬ್ಬಂದಿ ಮಂಜುನಾಥ್, ರಮಣಯ್ಯ, ಮಹೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net