ಕಲಬುರಗಿ ಜಯದೇವ ಹೃದ್ರೋಗ ಆಸ್ಪತ್ರೆ ಕಾಮಗಾರಿ ಡಿಸೆಂಬರ್‌ಗೆ ಪೂರ್ಣ : ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮನ ; ಅಜಯಸಿಂಗ್ ಹೇಳಿಕೆ

IMG-20230822-WA0013
Published on

ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಕಾರ್ಯದರ್ಶಿ ಅನಿರುದ್ಧ ಶ್ರವಣ ಜತೆಗೂಡಿ ಕಟ್ಟಡದ ನಿರ್ಮಾಣ ಕಾರ್ಯ ಪರಿಶೀಲನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲ್ಯಾಣ ಕರ್ನಾಟಕ ಭಾಗದ ಹೃದ್ರೋಗಿಗಳಿಗೆ ವರವಾಗಲಿರುವ ಜಯದೇವ ಹೃದ್ರೋಗ ವಿಜ್ಞಾನಗಳ ಹಾಗೂ ಸಂಶೋಧನಾ ಸಂಸ್ಥೆಯ ೩೭೧ ಹಾಸಿಗೆಗಳ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷ ಡಾ.ಅಜಯ ಧರ್ಮಸಿಂಗ್ ತಿಳಿಸಿದರು.
ನಗರದ ಮುಖ್ಯರಸ್ತೆಯಲ್ಲಿರುವ  ೬.೮ ಎಕರೆ ಪ್ರದೇಶದಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಸ್ಪತ್ರೆಯ ಕಟ್ಟಡದ ಕಾಮಗಾರಿಯನ್ನು ಇಂದು ಪರಿಶೀಲಿಸಿದ ಬಳಿಕ ಪತ್ರಕರ್ತರ ಜತೆಗೆ ಮಾತನಾಡಿ, ಡಿಸೆಂಬರ್ ಇಲ್ಲವೇ ಜನೇವರಿ ತಿಂಗಳಲ್ಲಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಹ್ವಾನಿಸಲಾಗುವುದು ಎಂದರು.
ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮತ್ತು ಆರೋಗ್ಯ ಸಚಿವ ದಿನೇಶ ಗುಂಡುರಾವ ಅವರೊಂದಿಗೆ ಸಮಾಲೋಚನೆ ನಡೆಸುವೆ. ಎಲ್ಲರ ಅಭಿಪ್ರಾಯದಂತೆ  ಉದ್ಘಾಟನೆ ದಿನಾಂಕವನ್ನು ನಿರ್ಧರಿಸಲಾಗುವುದು.ಜಯದೇವ ಆಸ್ಪತ್ರೆ ಇಲ್ಲಿ ಬರುತ್ತಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದವರಿಗೆ ತುರ್ತು ಚಿಕಿತ್ಸೆಗೆ ಅನುವು ಆಗಲಿದೆ  ಎಂದು ಹೇಳಿದರು.
ಈ ಆಸ್ಪತ್ರೆಯು ೩೭೧ ಹಾಸಿಗೆ ಹೊಂದಿದೆ. ಅದಕ್ಕೆ ತಕ್ಕಂತೆ ಹೈಟೆಕ್ ಆಗಿರುವ ಎಲ್ಲ ವೈದ್ಯಕೀಯ ಸಲಕರಣೆಗಳು, ಸಿಬ್ಭಂದಿ, ವೈದ್ಯರು ಹೀಗೆ  ಎಲ್ಲ ಅಗತ್ಯವಿರುವ ಸೌಲಭ್ಯವನ್ನು ಕಲ್ಪಿಸಿಯೇ ಉದ್ಘಾಟನೆ ಮಾಡಲಾಗುವುದು. ಈ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಕಾಮಗಾರಿಗೆ ಈಗಾಗಲೇ ಮಂಡಳಿಯಿAದ ೧೪೫ ಕೋ.ರೂ. ಬಿಡುಗಡೆ ಮಾಡಲಾಗಿದೆ.ಅದರಲ್ಲಿ ಈಗಾಗಲೇ ೧೧೫ ಕೋ.ರೂ.ವೆಚ್ಚವಾಗಿದೆ. ಒಟ್ಟು ೧೮೨.೭೮ ಕೋ.ರೂ.ಗೆ ಸಂಪುಟ ಅನುಮೋದನೆ ನೀಡಿದೆ. ಉಳಿದ ಮೊತ್ತವನ್ನು ಮಂಡಳಿಯಲ್ಲಿ ಚರ್ಚೆ ನಡೆಸಿ ಬಿಡುಗಡೆ ಮಾಡಲಾಗುವುದು ಎಂದು ಡಾ.ಅಜಯಸಿಂಗ್ ವಿವರಿಸಿದರು.
ಜಯದೇವ ಆಸ್ಪತ್ರೆ ಕೆಕೆಆರ್‌ಡಿಬಿ. ನೆರವಿನಲ್ಲಿ ಕೈಗೆತ್ತಿಕೊಂಡಿರುವ ಬಹುದೊಡ್ಡ ಯೋಜನೆ ಇದಾಗಿದೆ. ೨೦೧೯ರಲ್ಲಿ ಕಾಮಗಾರಿ ಆರಂಭವಾಗಿದೆ. ಯುದ್ದೋಪಾದಿಯಲ್ಲಿ ಕೆಲಸ ಸಾಗಿದೆ. ಬರುವ ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಕಲಬುರಗಿಯಲ್ಲಿ ೨೦೧೬ರಲ್ಲಿ ಜಯದೇವ ಆಸ್ಪತ್ರೆ ಜಿಮ್ಸ್ನಲ್ಲಿ  ಆರಂಭಕ್ಕೂ ಮುನ್ನ ಇಲ್ಲಿನ ಹೃದ್ರೋಗಿಗಳು ಚಿಕಿತ್ಸೆಗೆ ನೆರೆಯ ಸೋಲಾಪುರ, ಹೈದ್ರಾಬಾದ್ ಅಥವಾ ಬೆಂಗಳೂರಿಗೆ ಹೋಗಬೇಕಾಗಿತ್ತು. ಈಗ ಇಲ್ಲಿಯೇ ಉನ್ನತ ಗುಣಮಟ್ಟದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಆಸ್ಪತ್ರೆ ನಿರ್ಮಾಣದಿಂದ ಈ ಭಾಗದ ಬಡ ರೋಗಿಗಳಿಗೆ ಮತ್ತಷ್ಟು ಸೇವೆ ಗುಣಮಟ್ಟದಿಂದ ಸಿಗಲಿದೆ ಎಂದು ಅಜಯಸಿಂಗ್ ನುಡಿಡದರು.
 ಮಂಡಳಿಯ ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ., ಉಪ ಕಾರ್ಯದರ್ಶಿ ಆನಂದ ಪ್ರಕಾಶ ಮೀನಾ, ಜಯದೇವ ಆಸ್ಪತ್ರೆ ಕಲಬುರಗಿ ಮುಖ್ಯಸ್ಥ ಡಾ.ಬಾಬುರಾವ ಹುಡಗಿಕರ್ , ಮುಖಂಡರಾದ ಶರಣಬಸಪ್ಪ ಭೂಸನೂರ, ಗುಲಿಂಗಪ್ಪಗೌಡ ಪಾಟೀಲ್ ಆಂದೋಲಾ, ಬಸವರಾಜ ಬಿರಾದಾರ ಸೊನ್ನ. ಸಕ್ರೆಪ್ಪಗೌಡ ಪಾಟೀಲ್ ಹರನೂರ, ವಿಜಯಕುಮಾರ್ ಪಾಟೀಲ್ ಹಂಗರಗಿ, ಮಲ್ಲಿಕಾರ್ಜುನ ಸಾಹು ಹಲಕರ್ಟಿ, ರಾಜಶೇಖರ ಸಿರಿ, ಶಾಂತಪ್ಪ ಕೂಡಲಗಿ, ,ಬಸವರಾಜ ಬೂದಿಹಾಳ ,ಕಾಶಿಮಪಟೇಲ್, ಚಂದ್ರಶೇಖರ ಹರನಾಳ, ಕಾಶಿರಾಯಗೌಡ ಯಲಗೋಡ, ರುಕುಂಪಟೇಲ್ ಇಜೇರಿ, ಶೌಕತ ಅಲಿ ಆಲೂರ, ನಾಗಣ್ಣ ಹಾಗರಗುಂಡಗಿ, ಚಂದ್ರಶೇಖರ್ ಪುರಾಣಿಕ, ರಜಾಕ್ ಮಣಿಯಾರ್‌ ಮೊದಲಾದಚರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net