

ತುಮಕೂರು: ಶಿರಾ ಉಪಸಮರದಲ್ಲಿ ಕಳೆದೊಂದು ತಿಂಗಳಿನಿಂದ ಹಗಲಿರುಳು ಹೋರಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ ಕರೊನಾ ಸೋಂಕು ತಗುಲಿದೆ.
ಚುನಾವಣಾ ಘೋಷಣೆಯಾದಾಗಿನಿಂದ ಕಾಲಿಗೆ ಚಕ್ರಕಟ್ಟಿಕೊಂಡು ಸುತ್ತಿದ್ದ ಜಯಚಂದ್ರ ಮತದಾನ ಮುಗಿದ ಬಳಿಕವೂ ಚಟುವಟಿಕೆಯಿಂದಲೇ ಇದ್ದರು. ಭಾನುವಾರದಿಂದ ಸ್ಚಲ್ಪ ಸುಸ್ತು ಕಾಣಿಸಿಕೊಂಡಿದ್ದು ಕರೊನಾ ಪರೀಕ್ಷೆಗೆ ಒಳಪಟ್ಟಾಗ ಸೋಂಕು ತಗುಲಿರುವುದು ದೃಢವಾಗಿದೆ.
ಜಯಚಂದ್ರ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪತ್ನಿ ನಿರ್ಮಲಾ ಅವರಿಗೂ ಕೂಡು ಸೋಂಕು ತಗುಲಿದೆ. ಮಂಗಳವಾರ ಬೈಎಲೆಕ್ಷನ್ ಮತ ಎಣಿಕೆ ನಡೆಯಲಿದ್ದು ಜಯಚಂದ್ರ ಆಸ್ಪತ್ರೆ ಸೇರಿದ್ದಾರೆ.