

ಜಯ ನಗರದ ಶಿವ ಮಂದಿರದಲ್ಲಿ ಶ್ರಾವಣ ಪ್ರವಚನ ಶುರು
ಕಲಬುರಗಿ: ಪ್ರವಚನಗಳು, ಪುರಾಣಗಳು ಧರ್ಮ, ಸಂಸ್ಕೃತಿಯನ್ನು ಸಾರಿ ಹೇಳುತ್ತವೆ. ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದರಿಂದ ಬದುಕಿಗೆ ದಾರಿ ಕೊಂಡುಕೊಳ್ಳಲು ಸಾಧ್ಯ ಎಂದು ಎಚ್ಕೆಇ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಹೇಳಿದರು.
ಜಯನಗರ ಶಿವಮಂದಿರದಲ್ಲಿ ಶ್ರಾವಣ ಮಾಸದ ನಿಮಿತ್ತ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಒಂದು ತಿಂಗಳ ಕಾಲ ಶಿವ ಧರ್ಮ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶರಣರು,ಸಂತರು ನಡೆಸಿದ ಸರಳ ಜೀವನ ಇಂದಿನ ಜನಾಂಗಕ್ಕೆ ಮಾದರಿಯಾಗಬೇಕು.ಮಹಾತ್ಮರು ಪರೋಪಕಾರಿಯಾಗಿ ಬದುಕಿದರು.ಕಾಯಕದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಮೆರೆದವರು.ಜಾತಿ, ಧರ್ಮ,ಭೇದ ಭಾವ ಅನ್ನದೆ ಮಾನವ ಕುಲದ ಉದ್ಧಾರಕ್ಕಾಗಿ, ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನರು.ಅಂಥವರ ಪ್ರವಚನ, ಪುರಾಣಗಳು ಕೇಳುವ ಮೂಲಕ ಬದುಕಿಗೆ ಹೊಸ ಚೈತನ್ಯ ತಂದುಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿ ಶಿವ ಧರ್ಮ ಎಲ್ಲರಲ್ಲೂ ಸಮಾನತೆ ಕಾಣುವ, ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುತ್ತದೆ.ಸಕಲ ಜೀವರಾಶಿಯ ಲೇಸನ್ನೇ ಬಯಸಿ ಬಸವಣ್ಣನವರ ವಚನಗಳ ಮೂಲಕ ದಾರಿ ತೋರುವ ಬೇಳಕಾಗಿದೆ.ಬಸವ ತತ್ವ ಕೇವಲ ಹೇಳುವುದಕ್ಕಲ್ಲ ಆಚರಣೆಯಾಗಿಸಿಕೊಳ್ಳಬೇಕು.ಶರಣರು,ಸಂತರು ಎಲ್ಲರೂ ಶಿವನ ಪರಿಪಾಲಕರಾಗಿದ್ದಾರೆ.ಶಿವನಿಗೆ ನಿಷ್ಠೆಯಿಂದ ಪಠಿಸಿದರೆ ಮನಸ್ಸಿನಲ್ಲಿದ್ದದ್ದು ಸಿದ್ಧಿಯಾಗುವುದು.ಅನುಮಾನವೇ ಬೇಡ.ಶಿವನು ಜಗದೋಡೆಯನು ಎಲ್ಲರನ್ನು ಕಾಯುತ್ತಾನೆ ಎಂದ ಅವರು 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದಲ್ಲಿ ಸ್ತ್ರೀ, ಪುರುಷರನ್ನು ಸಾಮಾನ್ಯವಾಗಿ ಕುರಿಸುತ್ತಿದ್ದರು.ಅಂಥದೇ ಇಂದು ಶಿವಮಂದಿರದಲ್ಲಿ ನೋಡಲು ಸಿಗುತ್ತಿದೆ.ಯಾವುದೇ ಭೇದ ಭಾವವಿಲ್ಲದೆ ಸಮಾನವಾಗಿ ಕುಳಿತ್ತಿದ್ದಾರೆ ಎಂದು ಗುಣಗಾನ ಮಾಡಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಾಹಿತಿ ಡಾ ಚಿ.ಸಿ.ನಿಂಗಣ್ಣ ಮಾತನಾಡಿ ಜನರು ಪುರಾಣ, ಪ್ರವಚನಗಳಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಸಿಗುತ್ತದೆ.ಅಷ್ಟೇ ಅಲ್ಲದೆ ಮಹಾತ್ಮರ ಜೀವನ ಚರಿತ್ರೆ ಕೇಳುವುದರಿಂದ ಜೀವನ ಪಾವನವಾಗುತ್ತದೆ ಎಂದು ಹೇಳಿದರು
ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು ಧಾರ್ಮಿಕ ಕಾರ್ಯಕ್ರಮಗಳು ಮಾಡುವುದರ ಜೊತೆಗೆ ಆಧ್ಯಾತ್ಮಿಕ ಪ್ರವಚನಗಳು ಜನರ ಮನಮುಟ್ಟುವಂತೆ ಮಾಡುವುದು ಟ್ರಸ್ಟ್ ಉದ್ದೇಶವಾಗಿದೆ ಎಂದು ತಿಳಿಸಿದರು.
ಯುವ ಮುಖಂಡ ಮನೀಷ್ ಜಾಜು, ಟ್ರಸ್ಟ್ ಉಪಾಧ್ಯಕ್ಷ ವಿರೇಶ ದಂಡೋತಿ ವೇದಿಕೆಯಲ್ಲಿದ್ದರು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಸ್ವಾಗತಿಸಿದರು.ಜಿ.ಜಿ.ವಣಿಕ್ಯಾಳ ನಿರೂಪಿಸಿದರು.ಟ್ರಸ್ಟ ಕಾರ್ಯದರ್ಶಿ ಶಿವಪುತ್ರಪ್ಪ ಮರಡಿ, ಸಂಘಟನಾ ಕಾರ್ಯದರ್ಶಿ ಬಂಡಪ್ಪ ಕೇಸೂರ, ಸಹ ಕಾರ್ಯದರ್ಶಿ ಸಿದ್ಧಲಿಂಗ ಗುಬ್ಬಿ, ಕೋಶಾಧ್ಯಕ್ಷ ಬಸವರಾಜ ಮಾಗಿ, ಸದಸ್ಯರಾದ ಮಲ್ಲಿಕಾರ್ಜುನ ಕಲ್ಲಾ,ಬಸವರಾಜ ಅನ್ವರಕರ,ಎಂ.ಡಿ.ಮಠಪತಿ, ಭೀಮಾಶಂಕರ ಶೆಟ್ಟಿ, ನಾಗರಾಜ ಖೂಬಾ,ಟಿ.ಸಿ.ಚವ್ಹಾಣ,ಎಸ್.ಡಿ.ಸೇಡಂಕರ, ಮನೋಹರ ಬಡಶೇಷಿ, ವೀರಪ್ಪ ಹುಡುಗಿ, ಈರಯ್ಯ ಮಾಡಬಾಳಮಠ.ಮಲ್ಲಯ್ಯ ಸ್ವಾಮಿ ಬೀದಿಮನಿ, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ, ಅನಿತಾ ನವಣಿ, ಸುಷ್ಮಾ ಮಾಗಿ, ಸುರೇಖಾ ಬಾಲಕೊಂದೆ, ವಿಜಯಾ ದಂಡೋತಿ, ನಿಲೋಚನಾ ಬಿಡಪ್ಪ, ಅಂಬಕ್ಕಾ ಪಾಟೀಲ್, ಗೀತಾ ಲಿಂಗರಾಜ, ಅನುರಾಧ ಕುಮಾರಸ್ವಾಮಿ ಸೇರಿದಂತೆ ಮಹಿಳೆಯರು, ಹಿರಿಯರು ಭಾಗವಹಿಸಿದ್ದರು.