ಮದ್ದುಗುಡ್ಡೆ ಫ್ರೆಂಡ್ಸ್ ತಂಡಕ್ಕೆ ಜಟ್ಟಿಗೇಶ್ವರ ಟ್ರೋಫಿ

gan-5
Published on

ಗಂಗೊಳ್ಳಿ: ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್, ಲೈಟ್ ಹೌಸ್ ಗಂಗೊಳ್ಳಿ 34ನೇ ವಾರ್ಷಿಕೋತ್ಸವದ ಅಂಗವಾಗಿ ಕೊಂಕಣಿ ಖಾರ್ವಿ ಸಮಾಜ ಬಾಂಧವರಿಗಾಗಿ ಲೈಟ್‌ಹೌಸ್ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಭಾನುವಾರ ಜರುಗಿದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯದಲ್ಲಿ ಮದ್ದುಗುಡ್ಡೆ ಫ್ರೆಂಡ್ಸ್ ಕುಂದಾಪುರ ತಂಡ ಪ್ರಥಮ ಸ್ಥಾನ ಪಡೆದು ಶ್ರೀ ಜಟ್ಟಿಗೇಶ್ವರ ಟ್ರೋಫಿ ತನ್ನದಾಗಿಸಿಕೊಂಡಿತು.

ಕೋಟೆ ಜಟ್ಟಿಗೇಶ್ವರ ತಂಡ ದ್ವಿತೀಯ, ಸಹರಾ ಗಂಗೊಳ್ಳಿ ತಂಡ ತೃತೀಯ ಹಾಗೂ ನವದುರ್ಗ ಹೊನ್ನಾವರ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು. ಪಂದ್ಯದಲ್ಲಿ 15 ತಂಡಗಳು ಭಾಗವಹಿಸಿದ್ದವು.

ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಯಶವಂತ ಖಾರ್ವಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಖಿಕ ಕರ್ನಾಟಕ ಕೊಂಕಣ ಖಾರ್ವಿ ಕಬಡ್ಡಿ ಅಸೋಸಿಯೇಷನ್ ಉಪಾಧ್ಯಕ್ಷ ಜಗದೀಶ್ ತಾಂಡೇಲ, ಕ್ರೀಡಾಪಟು ಮಡಿ ಹರೀಶ್ ಖಾರ್ವಿ, ಉದ್ಯಮಿ ಅಕ್ಷಯ ಖಾರ್ವಿ ವಿಜೇತರಿಗೆ ಬಹುಮಾನ ವಿತರಿಸಿದರು.

ಹಿರಿಯರಾದ ಮಡಿ ಬಿಕ್ಯ ಖಾರ್ವಿ, ಗಂಗೊಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಶ್ವಿನಿ ಆರ್.ಖಾರ್ವಿ ಮತ್ತು ಅಕ್ಕಮ್ಮ ಯು., ಸಂಘದ ಅಧ್ಯಕ್ಷ ಚಂದ್ರ ಕೆ.ಖಾರ್ವಿ, ಉಪಾಧ್ಯಕ್ಷ ಕಿರಣ್ ಖಾರ್ವಿ, ಕಾರ್ಯದರ್ಶಿ ಮಡಿ ಚೇತನ್ ಖಾರ್ವಿ, ಮಹಿಳಾ ಮಂಡಳಿ ಅಧ್ಯಕ್ಷೆ ಜಯಂತಿ ಜಿ.ಖಾರ್ವಿ, ಮಹಿಳಾ ಮಂಡಳಿ ಜತೆ ಕ್ರೀಡಾ ಕಾರ್ಯದರ್ಶಿ ಉಷಾ ಖಾರ್ವಿ ಉಪಸ್ಥಿತರಿದ್ದರು.

ಅಖಿಕ ಕರ್ನಾಟಕ ಕೊಂಕಣಿ ಖಾರ್ವಿ ಕಬಡ್ಡಿ ಅಸೋಸಿಯೇಷನ್ ಮತ್ತು ಶ್ರೀ ಜಟ್ಟಿಗೇಶ್ವರ ಮಹಿಳಾ ಮಂಡಳಿ ಲೈಟ್‌ಹೌಸ್ ಗಂಗೊಳ್ಳಿ ಸಹಕಾರದೊಂದಿಗೆ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net