ಇಂದು ಕೆರ್ಜಾಡಿ ದೇಗುಲದಲ್ಲಿ ಜಾತ್ರೋತ್ಸವ

durgaparameshwari
ಚಿತ್ತೇರಿ ಶ್ರೀದುರ್ಗಾಪರಮೇಶ್ವರಿ
Published on

ಆರ್ಡಿ: ಕೆರ್ಜಾಡಿ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ಸಪರಿವಾರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ಜಾತ್ರೋತ್ಸವ ಮೇ 8ರಂದು ನಡೆಯಲಿದೆ.

ಬೆಳಗ್ಗೆ ಪ್ರಾರ್ಥನೆ, ಗುರುಗಣಪತಿ ಪೂಜೆ, ಪುಣ್ಯಾಹವಾಚನ, ನವಕ ಪ್ರಧಾನ ಹೋಮ, ಚಂಡಿಕಾಹೋಮ ನೆರವೇರಲಿದೆ. 11.30ಕ್ಕೆ ಪಂಚಾಮೃತ ಸಹಿತ ಕಲಶಾಭಿಷೇಕ, 12ಕ್ಕೆ ಚಂಡಿಕಾಹೋಮದ ಪೂರ್ಣಾಹುತಿ, 12.30ಕ್ಕೆ ಅನ್ನಪ್ರಸಾದ ಜರುಗಲಿದೆ. ಸಂಜೆ 6ರಿಂದ ಚಿತ್ತೇರಿ ಆರ್ಡಿ ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ, ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಶೇಡಿಮನೆ ಶ್ರೀ ಜಲದುರ್ಗಾ ಭಜನಾ ಮಂಡಳಿಂದ ಕುಣಿತ ಭಜನಾ ಮಹೋತ್ಸವ, ರಾತ್ರಿ 9.30ರಿಂದ ರಂಗಪೂಜೆ, ಸಂದರ್ಶನ, ಸುತ್ತು ಬಲಿ, ರಾತ್ರಿ 9.30ಕ್ಕೆ ಅನ್ನಪ್ರಸಾದ ನೆರವೇರಲಿದೆ.

2023ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾರಂಪರಿಕ ನಾಟಿ ವೈದ್ಯ ಭೋಜ ನಾಯ್ಕ ಕರ್ಪಾಡಿ ಅವರಿಗೆ ದೇವಳದ ವತಿಯಿಂದ ಗೌರವಾರ್ಪಣೆ ನಡೆಯಲಿದೆ. ತಂತ್ರಿ ಗಿರೀಶ್ ಸೋಮಾಯಾಜಿ ಪಡುವಳ್ಳಿ ಗೌರವಾರ್ಪಣೆ ನೆರವೇರಿಸಲಿದ್ದಾರೆ. 11ರಿಂದ ಕಲ್ಲುಕುಟಿಗ ಮತ್ತು ಸತ್ಯದೇವತೆಗೆ ಸಿರಿ ಸಿಂಗಾರ ಕೋಲಸೇವೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯತಿರಾಜ್ ಶೆಟ್ಟಿ ಜಗ್ಲುಗುಡ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net