

ನುಗ್ಗೇಹಳ್ಳಿ: ಹೋಬಳಿಯ ಕಲ್ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಚೌಡೇನಹಳ್ಳಿ ಸಿ.ಈ.ಜ್ಞಾನೇಂದ್ರ (ರಮೇಶ್) ಆಯ್ಕೆಯಾದರು.
ಜೆ.ಕೆ.ಭವ್ಯಾ ಮಧು ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಜ್ಞಾನೇಂದ್ರ, ಜಿ.ಎಂ.ಹರೀಶ್ ಇಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆಯಿತು. ಒಟ್ಟು 19 ಜನ ಸದಸ್ಯರಿದ್ದು ಎಲ್ಲರೂ ಚುನಾವಣಾ ಪ್ರಕ್ರಿಯೆಯಲ್ಲಿ ಹಾಜರಿದ್ದರು. ಜ್ಞಾನೇಂದ್ರ 11 ಮತಗಳನ್ನು ಪಡೆದು ಆಯ್ಕೆಯಾದರೆ, ಜಿ.ಎಂ.ಹರೀಶ್ 8 ಮತ ಪಡೆದು ಪರಾಭವಗೊಂಡರು. ಚುನಾವಣಾ ಅಧಿಕಾರಿಯಾಗಿ ತಾಲೂಕು ಪಂಚಾಯಿತಿ ಇಒ ಹರೀಶ್ ಕಾರ್ಯನಿರ್ವಹಿಸಿದರು.
ಸಿ.ಎನ್.ಪುಟ್ಟಸ್ವಾಮಿಗೌಡ, ಧರ್ಮರಾಜ್, ನಾಗೇಗೌಡ, ನೇರಲಕೆರೆ ಅಶೋಕ್, ಆಶಾ, ಕುಮಾರಸ್ವಾಮಿ, ಬೈರೇಗೌಡ, ಮಧು, ಸಾತೇನಹಳ್ಳಿ ಆನಂದ್ ಇತರರಿದ್ದರು.