

ತಿಪಟೂರು: ರಾಜ್ಯದ ಹಳ್ಳಿಗಾಡಿಗಳಿಗೂ ಹೊಸ ರೈಲು ಸೇವೆ ಕಲ್ಪಿಸಲು ಪ್ರಧಾನಿ ಮೋದಿ ಒಲವು ತೋರಿದ್ದಾರೆ ಎಂದು ರಾಜ್ಯ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ಶಿವಮೊಗ್ಗ-ಬೆಂಗಳೂರು ಮತ್ತು ಹುಬ್ಬಳ್ಳಿ-ಬೆಂಗಳೂರು ಜನಶತಾಬ್ದಿ ರೈಲುಗಳ ನಿಲುಗಡೆಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಕಳೆದ 10-15 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರೈಲ್ವೇ ಮೇಲ್ಸೇತುವೆ ಮತ್ತು ಕೆಳ ಸೇತುವೆ ಕಾಮಗಾರಿಗಳಿಗೆ ಶರವೇಗದಲ್ಲಿ ಚಾಲನೆ ನೀಡಲಾಗಿದೆ. ನಗರದಲ್ಲಿ ಬಾಕಿ ಇರುವ ಹಾಸನ ರಸ್ತೆ ಮತ್ತು ಹೊನ್ನವಳ್ಳಿ ಬಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಸದ್ಯದಲ್ಲಿ ಚಾಲನೆ ನೀಡಲಾಗುವುದು ಎಂದರು.
ಬಹು ನಿರೀತ ಹಾಸನ&ತಿಪಟೂರು&ಹಿರಿಯೂರು ರೈಲ್ವೇ ಮಾರ್ಗವನ್ನು ಗ್ರೀನ್ ಗೋಲ್ಡ್ ಕಾರಿಡಾರ್ನಡಿ ಗುರುತಿಸಿ 3500 ಕೋಟಿ ವೆಚ್ಚದಲ್ಲಿ ನೂತನ ರೈಲು ಮಾರ್ಗ ನಿರ್ಮಾಣವಾಗಲಿದೆ. ಮತ್ತು ತುರುವೇಕೆರೆ&ಚಿಂಚೋಳಿ ರಸ್ತೆ ನಿರ್ಮಾಣಕ್ಕೆ 616 ಕೋಟಿ ಅನುದಾನ ಬಿಡುಗಡೆಯಾಗಿದೆ. ಯೋಜನೆಗೆ ಹಣ ತರುವುದು ಹೇಗೆ ಮುಖ್ಯವೋ ಇದೇ ರೀತಿ ರ್ಖಚಾದ ಪೈಸೆ, ಪೈಸೆಯ ಲೆಕ್ಕವೂ ಮುಖ್ಯ. ಯಾವುದೇ ಕಾರಣಕ್ಕೂ ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗಲು ಬಿಡುವುದಿಲ್ಲ ಎಂದು ತಿಳಿಸಿದರು.
ವೇದಿಕೆಯಲ್ಲಿ ಶಾಸಕರಾದ ಬಿ.ಸುರೇಶ್ಗೌಡ, ಜಿ.ಬಿ.ಜ್ಯೋತಿಗಣೇಶ್, ಮಾಜಿ ಶಾಸಕ ಮಸಾಲ ಜಯರಾಂ. ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರ ದಿವಾಳಿಯಾಗಿದ್ದ ಗುಂಡಿ ಬಿದ್ದಿರುವ ರಸ್ತೆಗಳನ್ನು ಮುಚ್ಚಲು ಮಣ್ಣು ಹಾಕಲು ಹಣವಿಲ್ಲ. ಜಿಲ್ಲೆಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಸಿಆರ್ಎಫ್ ನಿಧಿಯಡಿ 500 ಕೋ.ರೂ., ಅನುದಾನ ಕೊಟ್ಟರೆ ರಸ್ತೆಗಳು ಉಳಿದು, ನಮ್ಮ ಮರ್ಯಾದೆಯೂ ಉಳಿಯುತ್ತೆ.
ಬಿ.ಸುರೇಶ್ಗೌಡ,
ಗ್ರಾಮಾಂತರ ಶಾಸಕ
ಈಚನೂರು ಕೆರೆ ಸೇರುತ್ತಿರುವ ಯುಜಿಡಿ ತ್ಯಾಜ್ಯ ನೀರು ತುಮಕೂರುವರೆಗೂ ಹರಿಯುವ ಅಪಾಯವಿದ್ದು, ಇದನ್ನು ತಡೆಗಟ್ಟಲು ಸೂಕ್ತ ಮಾಗೋರ್ಪಾಯ ಕಂಡುಕೊಳ್ಳಲಾಗುವುದು.
ನಾನು ೂಷಿಸಿರುವ ಯೋಜನೆಗಳು ನನ್ನ ಅವಧಿಯಲ್ಲಿ ಮುಕ್ತಾಯವಾಗಿಯೇ ತೀರುತ್ತೆ. ಕೊಟ್ಟ ಮಾತು ತಪ್ಪೋಲ್ಲ. ಸಂಪಿಗೆರೋಡು ರೈಲು ನಿಲ್ದಾಣ ಸುತ್ತಮುತ್ತ ಹೆಚ್ಚು ಅಡಿಕೆ ಬೆಳೆಯುವ ಪ್ರದೇಶವಾದ್ದರಿಂದ ಚಿಕ್ಕಮಗಳೂರು ರೈಲಿಗೆ ಅಲ್ಲಿ ನಿಲುಗಡೆ ನೀಡಲಾಗಿದೆ. ಹಾಗೆಂದು ಅರಳಗುಪ್ಪೆ ಜನರ ಬೇಡಿಕೆಯನ್ನು ಕಡೆಗಣಿಸುವುದಿಲ್ಲ. ಮುಂದಿನ ಒಂದು ತಿಂಗಳೊಳಗೆ ಅರಳಗುಪ್ಪೆಯಲ್ಲೂ ಚಿಕ್ಕಮಗಳೂರು ರೈಲು ನಿಲ್ಲಲಿದೆ.
ವಿ.ಸೋಮಣ್ಣ
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ