ಕ್ರಿಸ್ ಮಸ್ ದಿನದಂದು ರಾಜಕೀಯ ಅಜ್ಞಾತವಾಸದಿಂದ
ಹೊರಬರುವರಾ ಗಾಲಿ ಜನಾರ್ದನ ರೆಡ್ಡಿ ?

Janaradhana_Reddy
Published on

ತುಮಕೂರು: ಸಾರ್ವಜನಿಕರ ಜೀವನಕ್ಕೆ ಮರಳಬೇಕೆಂದು ಈಗಾಗಲೇ ನಿರ್ಧಾರ ಮಾಡಿದ್ದೇನೆ, ಡಿ.25ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಎಲ್ಲಾ ವಿಚಾರ ಹಂಚಿಕೊಳ್ಳುತ್ತೇನೆ. ಅಲ್ಲಿಯವರೆಗೂ ನಾಡಿನ ಮಠಗಳು, ದೇವಾಲಯಗಳಿಗೆ ಭೇಟಿ ನೀಡುತ್ತೇನೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಸಿದ್ದಗಂಗಾ ಮಠಕ್ಕೆ ಪತ್ನಿ ಅರುಣಾ ಜತೆ ಸೋಮವಾರ ಭೇಟಿ ನೀಡಿದ್ದ ಅವರು, ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆಯ ದರ್ಶನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ, ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಪುನಃ ಸಾರ್ವಜನಿಕ ಬದುಕಿಗೆ ಬರಬೇಕೆಂದು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಆಶೀರ್ವಾದ ಬೇಡಿ ದೇವಾಲಯಗಳು, ಮಠಗಳಿಗೆ ಭೇಟಿ ನೀಡುತ್ತಿದ್ದೇನೆ. ಸಾರ್ವಜನಿಕ ಬದುಕಿನಲ್ಲಿ ಜನರ ಆಶೀರ್ವಾದ, ಪ್ರೀತಿ ಬಹು ಮುಖ್ಯವಾಗಿದೆ. ಜತೆಗೆ ಶ್ರೀಗಳ ಮಾರ್ಗದರ್ಶನವೂ ಮುಖ್ಯ. ನಾನು ಕಳೆದ 34 ವರ್ಷಗಳಿಂದ ಸಿದ್ಧಗಂಗಾ ಮಠಕ್ಕೆ ಬಂದು ಶ್ರೀಗಳ ದರ್ಶನಾಶೀರ್ವಾದ ಪಡೆಯುತ್ತಿದ್ದೇನೆ. ಮಠಗಳು, ದೇವಾಲಯಗಳಿಗೆ ಭೇಟಿ ನೀಡಿದಾಗ ನನಗೆ ಮಾನಸಿಕವಾಗಿ, ದೈಹಿಕವಾಗಿ ಶಕ್ತಿ ಬರುತ್ತದೆ. ಹಾಗಾಗಿ, ಹಿಂದಿನಿಂದಲೂ ಮಠಗಳಿಗೆ ಭೇಟಿ ನೀಡುತ್ತಿರುತ್ತೇನೆ, ಇದರಲ್ಲಿ ಹೊಸತೇನಿಲ್ಲ ಎಂದರು

ಕೋಟ್..

ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಾತು ಸಿದ್ಧಗಂಗಾ ಮಠದಲ್ಲಿ ಸಾಕಾರವಾಗಿದೆ. ಡಾ.ಶಿವಕುಮಾರ ಸ್ವಾಮೀಜಿ ಅವರ ಆದರ್ಶ, ಸೇವಾ ಕೈಂಕರ್ಯ, ಕಾಯಕ ನಿಷ್ಠೆ ನಮಗೆ ಮಾರ್ಗದರ್ಶಕವಾಗಿದೆ.

ಜನರ್ದಾನರೆಡ್ಡಿ

ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net