

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನಿರ್ಮಾಣಗೊಳ್ಳಲಿರುವ ವಿಜಯ ಗೋಪುರದ ದೇಣಿಗೆ ಸಂಗ್ರಹ, ಮಾಹಿತಿ ಕಾರ್ಯಾಲಯವನ್ನು ಕ್ಷೇತ್ರದ ತಂತ್ರಿ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿ ಮಂಗಳವಾರ ಉದ್ಘಾಟಿಸಿದರು.
ಆನುವಂಶಿಕ ಆಡಳಿತ ಮೊಕ್ತೇಸರ ಶರತ್ಕೃಷ್ಣ ಪಡುವೆಟ್ನಾಯ, ರಾಜಗೋಪುರ ನಿರ್ಮಾಣ ಸಮಿತಿ ಉಪಾಧ್ಯಕ್ಷ ಮೋಹನ ಶೆಟ್ಟಿಗಾರ್, ಕಾರ್ಯದರ್ಶಿ ಲಕ್ಷ್ಮಣ ಸಪಲ್ಯ, ಉಜಿರೆ ಗಣ್ಯರು, ವರ್ತಕರು, ಸಮಿತಿ ಪದಾಧಿಕಾರಿಗಳಾದ ರಾಘವೇಂದ್ರ ಬೈಪಾಡಿತ್ತಾಯ, ಪ್ರಶಾಂತ್ ಜೈನ್, ರಾಮಚಂದ್ರ ಶೆಟ್ಟಿ, ಮಂಜುನಾಥ ಕಾಮತ್, ಭರತ್ ಕುಮಾರ್, ವನಿತಾ ವಿ.ಶೆಟ್ಟಿ, ವಿಶ್ವನಾಥ ಶೆಟ್ಟಿ, ಸಂಜೀವ ಕೆ., ಬಾಲಕೃಷ್ಣ ಶೆಟ್ಟಿ, ರಾಮಯ್ಯ ಗೌಡ, ರವಿ ಚೆಕ್ಕಿತ್ತಾಯ, ಶಿವರಾಮ ಬಿ.ಕೆ., ರಮೇಶ್ ಶೆಟ್ಟಿ, ಪಾಂಡುರಂಗ ಬಾಳಿಗಾ, ಅನಂತಕೃಷ್ಣ ಪಡುವೆಟ್ನಾಯ, ಪ್ರವೀಣ್, ಸತ್ಯನಾರಾಯಣ ಎರ್ಕಾಡಿತ್ತಾಯ, ಗಾಯತ್ರಿ ಶ್ರೀಧರ್, ಶಶಿಕಲಾ, ದೇವಪ್ಪ ಗೌಡ, ಪರಾರಿ ವೆಂಕಟ್ರಮಣ ಹೆಬ್ಬಾರ್, ಜಗದೀಶ್ ಪ್ರಸಾದ್, ಪುಷ್ಪಾವತಿ ಆರ್.ಶೆಟ್ಟಿ, ಪ್ರಕಾಶ್ ಪೆಜತ್ತಾಯ, ಪ್ರಕಾಶ್ ಕುದ್ದಣ್ಣಾಯ ಮೊದಲಾದವರು ಉಪಸ್ಥಿತರಿದ್ದರು.
ಭಕ್ತರು ಮೊದಲ ಕಂತಿನ ದೇಣಿಗೆ ಪಾವತಿಸಿ ರಶೀದಿ ಪಡೆದರು. ಶರತ್ ಕೃಷ್ಣ ಪಡುವೆಟ್ನಾಯ ಪ್ರಸ್ತಾವಿಸಿದರು. ರವೀಂದ್ರ ಶೆಟ್ಟಿ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಸಂಜೀವ ಶೆಟ್ಟಿ ಕುಂಟಿನಿ ವಂದಿಸಿದರು.