ಕಲಬುರಗಿ: ಸೇಡಂ ತಾಲೂಕಿನ ಮಳಖೇಡ ಕೋಟೆಯಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಭಾನುವಾರ ರಾಷ್ಟçಕೂಟರ ಇತಿಹಾಸ, ಸಾಧನೆ ಸಾರುವ ಜಾನಪದ ಗೀತಗಾಯನ ಜಾನಪದ ಝೇಂಕಾರ ಕಾರ್ಯಕ್ರಮ ಜರುಗಿತು. ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿAಗಪ್ಪ ಸ್ವರಚಿತ ಗೀತೆಯನ್ನು ಹಾಡಿದರು. ಪರಿಷತ್ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಪ್ರಮುಖರಾದ ಮುಡಬಿ ಗುಂಡೇರಾವ, ಬಸಯ್ಯಸ್ವಾಮಿ ಹೊದಲೂರ, ಶಿವಯೋಗಪ್ಪ ಬಿರಾದಾರ, ಅಸ್ಲಾಂ ಶೇಖ್, ಅಮರನಾಥ ಶಿವಮೂರ್ತಿ, ದೇವೇಂದ್ರಪ್ಪ ಗಣಮುಖಿ, ನಬಿಸಾಬ್ ಮಕನದಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.