

ತುಮಕೂರು: ತುಮಕೂರು ದಸರಾ ಉತ್ಸವ&2024ರ ಭಾಗವಾಗಿ ವಿಜಯದಶಮಿಯ ಶನಿವಾರದಂದು ಸೀತಕಲ್ಲು ಚಾಮುಂಡೇಶ್ವರಿ ದೇವಿಯ ಅದ್ದೂರಿ ಜಂಬೂಸವಾರಿಗೆ ತುಮಕೂರಿಗರು ಸಾಕ್ಷಿಯಾದರು. ಜಿಲ್ಲಾಡಳಿತದ ವತಿಯಿಂದ ಮೊದಲ ಬಾರಿ ಹಮ್ಮಿಕೊಂಡಿದ್ದ ದಸರಾ ಉತ್ಸವವದಲ್ಲಿ
ನಗರದ ಬಿಜಿಎಸ್ ವೃತ್ತದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾದ ಗೃಹಸಚಿವ ಡಾ. ಜಿ.ಪರಮೇಶ್ವರ ದಸರಾ ಮೆರವಣಿಗೆಗೆ ಚಾಲನೆ ನೀಡಿದರು. ನಗರದ 50ಕ್ಕು ಹೆಚ್ಚು ವಿವಿಧ ದೇವತೆಗಳ ಉತ್ಸವವು ಜಂಬೂಸವಾರಿಗೆ ಮೆರುಗು ತಂದವು. ಪೊಲೀಸ್ ಅಶ್ವಾರೋಹಿ ದಳ ಮೆರವಣಿಗೆಯನ್ನು ಮುನ್ನಡೆಸಿತು.
ಅಂಬಾರಿ ಹೊತ್ತ ಲಕ್ಷಿ$್ಮ: ನಗರದ ಕರಿಬಸವೇಶ್ವರ ಮಠದ ಆನೆ ಲಕ್ಷಿ$್ಮ ಅಂಬಾರಿ ಹೊತ್ತು ಗಜ ಗಾಂಭೀರ್ಯ ನಡೆಗೆ ಕಾಡು ಸಿದ್ದೇಶ್ವರ ಮಠದ ಲಕ್ಷಿ$್ಮ ಆನೆ ಸಾಥ್ ನೀಡಿತು. ಮೈಸೂರು ದಸಾರ ಆನೆಗಳಂತೆ ಲಕ್ಷಿ$್ಮ ದ್ವಯರನ್ನು ಸಿಂಗರಿಸಲಾಗಿತ್ತು. ಭವ್ಯ ಅಲಂಕೃತಗೊಂಡ ಲಕ್ಷಿ$್ಮ ಅಂಬಾರಿಯಲ್ಲಿ ಸೀತಕಲ್ಲು ಚಾಮುಂಡೇಶ್ವರಿ ದೇವಿಯನ್ನು ಕೂರಿಸಲಾಗಿತ್ತು. ಮಧ್ಯಾಹ್ನ 1ಕ್ಕೆ ಅಂಬಾರಿಯಲ್ಲಿನ ಚಾಮುಂಡೇಶ್ವರಿ ಮೂರ್ತಿಗೆ ಸಚಿವ ಪರಮೇಶ್ವ ಪತ್ನಿ ಕನ್ನಿಕಾ ಪರಮೇಶ್ವರಿ ಜತೆ ಪುಷ್ಪಾರ್ಚನೆ ಸಲ್ಲಿಸಿದರು. ಈ ವೇಳೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಿಇಒ ಜಿ.ಪ್ರಭು, ಕೇಂದ್ರ ವಲಯ ಐಜಿಪಿ ಲಾಬೂರಾಮ್, ಎಸ್ಪಿ ಕೆ.ವಿ.ಅಶೋಕ್, ಆಯುಕ್ತೆ ಬಿ.ವಿ.ಅಶ್ವಿಜ ಸಾಥ್ ನೀಡಿದರು.
ರಸ್ತೆಯಲ್ಲಿ ಕಾದ ಜನ: ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕು ಜನ ಕಾದು ನಿಂತು ಜಂಬೂಸವಾರಿಯನ್ನು ಕಣ್ತುಂಬಿಕುಂಡರು. ಜಂಬುಸವಾರಿಯುದ್ದಕ್ಕು ಅಧಿಕಾರಿಗಳ ಜತೆ ಪರಮೇಶ್ವರ್ ನಡೆದೇ ಸಾಗಿದರು. ಅಮಾನಿಕೆರೆ ರಸ್ತೆಯಲ್ಲಿ ಮೆರವಣಿಗೆ ಸಾಗುವಾಗ ಮಳೆ ಹನಿಗಳ ಸ್ವಾಗತಿಸಿದವು.
ಮೆರವಣಿಗೆಯಲ್ಲಿ ಚಿಟ್ ಮೇಳ, ಕರಡಿ ಮಂಜಲು, ಗಿಳಿ ಕುಣಿತ, ನಂದಿ ಧ್ವಜ ಕುಣಿತ, ಡೊಳ್ಳು ಕುಣಿತ, ಗೊರವರ ಕುಣಿತ, ಸೋಮಣ ಕುಣಿತ, ಗಾರುಡಿಗೊಂಬೆ, ನಾಸಿಕ್ ಡೋಲ್ , ಮೂಡಲಪಾಯ ಯಕ್ಷಗಾನ ವೇಷಧಾರಿಗಳು, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳು ಮೆರವಣಿಗೆಯನ್ನು ಮೆರುಗುಗೊಳಿಸಿದವು. ಕೋತಿತೋಪು ರಸ್ತೆ ಮಾರ್ಗವಾಗಿ ಸಾಗಿದ ಜಂಬೂಸವಾರಿ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಬಲತಿರುವ ಪಡೆದು ಬಿ.ಎಚ್.ರಸ್ತೆ ಮೂಲಕ ಭದ್ರಂ ವೃತ್ತದಿಂದ ಸಾಗಿ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಮೆರವಣಿಗೆ ಸಂಜೆ 4ರ ಹೊತ್ತಿಗೆ ಸಂಪನ್ನಗೊಂಡಿತು.
ಬನ್ನಿ ಕಡಿದ ಪರಂ
ಪ್ರಥಮ ಬಾರಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ದಸರಾ ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಹೊಣೆಹೊತ್ತಿರುವ ಸಚಿವ ಪರಮೇಶ್ವರಗೆ ಈ ಬಾರಿ ಶಮೀಪೂಜೆ ನೆರವೇರಿಸುವ ಅವಕಾಸ ದೊರೆತಿತ್ತು. ಸಾಂಪ್ರದಾಯಿಕವಾಗಿ ಶಮೀಪೂಜೆ ನೆರವೇರಿಸಿದ ಪರಮೇಶ್ವರ್ ಬನ್ನಿ ಕಡಿಯುವುದರೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಂಡಿತು.