ಖರ್ಚಿನ ನಿಖರ ಮಾಹಿತಿಗೆ ಜಮಾಬಂದಿ : ಬಂಟ್ವಾಳ ತಾಲೂಕು ಪಂಚಾಯಿತಿಯಲ್ಲಿ ಜಯರಾಮ್ ಹೇಳಿಕೆ

jambandi
Published on

ಬಂಟ್ವಾಳ: ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿ ಜಮಾ ಖರ್ಚಿನ ಕುರಿತು ನಿಖರವಾದ ಮಾಹಿತಿ ಪಡೆದುಕೊಳ್ಳಲು ಜಮಾಬಂದಿ ನಡೆಸಲಾಗುತ್ತಿದ್ದು, ತಾಪಂ ಅಧೀನ ಇಲಾಖೆಗಳು ಎಷ್ಟು ಹಣ ಉಳಿಕೆಯಾಗಿದೆ, ಯಾವ ಕಾರಣಕ್ಕಾಗಿ ಉಳಿಕೆಯಾಗಿದೆ ಎಂಬ ಕುರಿತು ಲಿಖಿತ ಮಾಹಿತಿ ಒದಗಿಸಬೇಕು ಎಂದು ಜಿಪಂ ಯೋಜನಾ ನಿರ್ದೇಶಕ ಜಯರಾಮ್ ಹೇಳಿದರು.

ಬಂಟ್ವಾಳ ತಾಪಂ ಸಭಾಂಗಣದಲ್ಲಿ ಮಂಗಳವಾರ ತಾಪಂ ಮತ್ತು ವಿವಿಧ ಇಲಾಖೆಗಳಲ್ಲಿನ ಜಮಾ ಖರ್ಚಿನ ಬಗ್ಗೆ ಸಾರ್ವಜನಿಕರ ಸಮ್ಮುಖದಲ್ಲಿ ಜಮಾಬಂದಿ ಕಾರ್ಯಕ್ರಮದಲ್ಲಿ ಸೂಚನೆ ನೀಡಿದರು.

ಯೋಜನೆಗಳ ಅನುಷ್ಠಾನ ಸಂದರ್ಭ ಪಾರದರ್ಶಕತೆ ಒದಗಿಸುವುದು ಮತ್ತು ನಾಗರಿಕರಿಗೆ ಮಾಹಿತಿ ಒದಗುವಂತೆ ಮಾಡುವುದಲ್ಲದೆ, ತಾಪಂ ಮತ್ತು ಇತರ ಅಧೀನ ಇಲಾಖೆಗಳಲ್ಲಿನ ಕಾರ್ಯಕ್ರಮ ಖರ್ಚು ವೆಚ್ಚಗಳ ಕುರಿತು ಸಾರ್ವಜನಿಕರಲ್ಲಿ ಮಾಹಿತಿ ದೊರಕುವಂತೆ ಮಾಡುವ ಉದ್ದೇಶ ಇದರಲ್ಲಿದೆ. ಘೋಶ್ವಾರೆಯಲ್ಲಿ ನಮೂದಿಸಲಾದ ಯೋಜನೇತರ ಗುರಿ, ಬಿಡುಗಡೆಗೊಂಡ ಹಣ ಹಾಗೂ ಖರ್ಚಾದ ಹಣದೊಂದಿಗೆ ಉಳಿಕೆಯಾದ ಅನುದಾನ ಪ್ರಸ್ತಾಪಿಸಿ, ಇದು ಯಾವ ಕಾರಣಕ್ಕಾಗಿ ಆಗಿದೆ ಎಂಬ ಕುರಿತು ಪ್ರತಿಯೊಂದು ಇಲಾಖೆಯಿಂದ ಮಾಹಿತಿ ಪಡೆದುಕೊಂಡರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಮಾತನಾಡಿ, ಕಳೆದ ವರ್ಷ ಹಲವಾರು ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ತಾಪಂ ಆಡಳಿತಾಧಿಕಾರಿ ಎ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪಕ ಪ್ರಕಾಶ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ತಾರಾನಾಥ ಸಾಲ್ಯಾನ್, ಸಿಡಿಪಿಒ ಮಮ್ತಾಜ್, ತೋಟಗಾರಿಕಾ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್, ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ಪಶುವೈದ್ಯಾಧಿಕಾರಿ ಡಾ.ಅವಿನಾಶ್ ಭಟ್, ತಾಪಂ ಸಿಬಂದಿ ಚಂದ್ರಾವತಿ, ಕುಶಾಲಪ್ಪ ಪೂರಕ ಮಾಹಿತಿ ನೀಡಿದರು. ತಾಪಂ ಇಒ ಸಚಿನ್ ಕುಮಾರ್ ಸ್ವಾಗತಿಸಿದರು. ಸಿಬಂದಿ ಚಂದ್ರಾವತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net