ಜಲಜಾ ಗಂಗೂರು ಮಹಿಳಾ ಹರಿದಾಸ ಸಾಹಿತ್ಯ ಪ್ರಶಸ್ತಿ ಪ್ರದಾನ ಭಾನುವಾರ

Published on

ಬೆಂಗಳೂರು : ಲೇಖಿಕಾ ಸಾಹಿತ್ಯ ವೇದಿಕೆ ಹಾಗು ಶ್ರೀಸತ್ಯಜ್ಞಾನ ಪ್ರಕಾಶನ ಕೊಡಮಾಡುವ ಜಲಜಾ ಗಂಗೂರು ಮಹಿಳಾ ಹರಿದಾಸ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ನಡೆಯಲಿದೆ.

ಜೆ.ಪಿ.ನಗರದ 1ನೇ ಹಂತದಲ್ಲಿರುವ ಜೆ.ಪಿ.ನಗರ ಕ್ಷೇಮಾಭಿವೃದ್ಧಿ ಸಂಘದ ಆವರಣದಲ್ಲಿ ಬೆಳಗ್ಗೆ 10.30ಕ್ಕೆ ಸಾಹಿತ್ಯ-ಸಂಗೀತ-ಸನ್ಮಾನ ಎಂಬ ವಿನೂತನ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಡಾ. ಟಿ.ಎನ್.ನಾಗರತ್ನ ಅವರಿಗೆ 2025ನೇ ಸಾಲಿನ ಜಲಜಾ ಗಂಗೂರು ಮಹಿಳಾ ಹರಿದಾಸ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುತ್ತದೆ. ಸಾಹಿತ್ಯ ಸಖಿ ಸಂಪಾದಕಿ ಶೈಲಜಾ ಸುರೇಶ್, ಐಪಿಎಸ್ ಅಧಿಕಾರಿ ಸವಿತಾ ಶ್ರೀನಿವಾಸನ್, ವಿದುಷಿ ಸ್ವರಶ್ರೀ ಸ್ನೇಹಾ ಹಂಪಿಹೊಳಿ, ಬಿ.ಸಿ. ಗಣೇಶ್, ಮುಕುಂದ ಗಂಗೂರು ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಸ್ವರಶ್ರೀ ವೃಂದದಿಂದ ಸಂಗೀತ ಸುಧೆ ಹಾಗು ಬಾಂಧವ್ಯ ಕಥಾ ಸಂಕಲನ ಮತ್ತು ಅರುಣಾ ಉದಯ ಭಾಸ್ಕರ್ ಅವರ ಶಿಕ್ಷಣ ಅಂದು ಇಂದು ಕೃತಿ ಲೋಕಾರ್ಪಣೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net