

ಸುಬ್ರಹ್ಮಣ್ಯ: ಸಂಪೂರ್ಣ ಶಿಥಿಲಗೊಂಡಿದ್ದ ಪಂಜದ ಜಳಕದ ಹೊಳೆ ಸೇತುವೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಗುರುವಾರ ಪರಿಶೀಲಿಸಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಲೋಕೊಪಯೋಗಿ ಇಲಾಖೆಗೆ ಸೂಚನೆ ನೀಡಿದ ಬೆನ್ನಲ್ಲೇ ಸೇತುವೆ ಸ್ಥಳಕ್ಕೆ ಶನಿವಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಗೋಪಾಲ್, ಸಹಾಯಕ ಅಭಿಯಂತ ಪರಮೇಶ್ವರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಜಳಕದ ಹೊಳೆ, ಉಪಾಧ್ಯಕ್ಷ ನಾರಾಯಣ ಕೃಷ್ಣ ನಗರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಂತ್ ಯು.ಬಿ, ಸದಸ್ಯರಾದ ಶರತ್ ಕುದ್ವ, ಜಗದೀಶ್ ಪುರಿಯ, ಚಂದ್ರಶೇಖರ ದೇರಾಜೆ, ಪ್ರಮೀಳಾ ಸಂಪ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ, ಲಿಗೋಧರ ಆಚಾರ್ಯ ಇದ್ದರು.