

ಬೈಲಹೊಂಗಲ: ತಾಲೂಕಿನ ಜಕ್ಕನಾಯ್ಕನಕೊಪ್ಪದ ಶ್ರೀ ಚನ್ನವಷಭೇಂದ್ರ ದೇವರಕೊಂಡ ಅಜ್ಜನವರ 32ನೇ ಜಾತ್ರೆ ಮಾ. 23ರಿಂದ ಆರಂಭವಾಗಿದ್ದು, 27ರವರೆಗೆ ಜರುಗಲಿವೆ. 25ರಂದು ವಿರಾಮ ಹೋಮ, 26ರಂದು ಚಕ್ರಮಂಡಲ ಹೋಮ, 27ರಂದು ಪಲ್ಲಕ್ಕಿ ಉತ್ಸವ, ಕುಂಭದೊಂದಿಗೆ ಶ್ರೀಮಠದ ನೂತನ ಪಟ್ಟಾಧಿಕಾರಿ ಶೀವಯೋಗಿಣಿ ಮಾತೆ ಶೋಭಾಯಾತ್ರೆ, ಪಟ್ಟಾಧಿಕಾರ ನಡೆಯಲಿದೆ. ಸಾಮೂಹಿಕ ವಿವಾಹ, ಸಂಜೆ 4 ಗಂಟೆಗೆ ಮಹಾರಥೋತ್ಸವ ಲ ದೀಪೋತ್ಸವ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.