ಮೊಳಗಿದ ಜೈರಾಮ ಶ್ರೀರಾಮ ಘೊಷಣೆ

22 upbr 2-Shriram pooje
Published on

ಉಪ್ಪಿನಬೆಟಗೇರಿ: ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಲ್ಲಿ ರಾಮನಾಮ ಜಪ ಜೋರಾಗಿದ್ದರೆ, ಇತ್ತ ಗ್ರಾಮೀಣ ಭಾಗದಲ್ಲಿಯೂ ಜೈ ಶ್ರೀರಾಮ.. ಜೈ ಜೈ ಶ್ರೀರಾಮ.. ಎಂಬ ಘೊಷಣೆಗಳು ಮೊಳಗಿದವು.


ಗ್ರಾಮ ಸೇರಿ ಸುತ್ತಲಿನ ಕಲ್ಲೂರ, ಕೊಟಬಾಗಿ, ಯಾದವಾಡ, ಪುಡಕಲಕಟ್ಟಿ, ಕರಡಿಗುಡ್ಡ, ಕುರುಬಗಟ್ಟಿ, ಮಂಗಳಗಟ್ಟಿ ನರೇಂದ್ರ, ತಡಕೋಡ, ಗರಗ, ಹಾರೋಬೆಳವಡಿ ಹಾಗೂ ಇತರ ಗ್ರಾಮಗಳಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಿದವು.


ಉಪ್ಪಿನಬೆಟಗೇರಿ ಗ್ರಾಮದ ಶ್ರೀರಾಮ ನಗರದ ಆಂಜನೇಯ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ಹನುಮನಕೊಪ್ಪ ಗ್ರಾಮದ ಕಲ್ಮೇಶ್ವರ ದೇವಸ್ಥಾನ, ಅಂಬಾಭವಾನಿ, ರೇಣುಕಾ ಯಲ್ಲಮ್ಮ, ಗ್ರಾಮದೇವಿ ದ್ಯಾಮವ್ವ- ದುರ್ಗವ್ವ, ಗಣೇಶ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದವು. ಇನ್ನು ಹಲವರು ಶ್ರೀರಾಮ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತರಿಗೆ ಸಿಹಿ ಹಂಚಿದರು.


ಸಂಜೆ ಮಹಿಳೆಯರು ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ದೀಪಗಳನ್ನು ಹಚ್ಚಿ ಭಕ್ತಿಯಿಂದ ಶ್ರೀರಾಮನಿಗೆ ನಮಿಸಿದರು. ಬಹುತೇಕ ಎಲ್ಲ ದೇವಸ್ಥಾನಗಳಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ನಂತರ ಧಾರ್ವಿುಕ ಕಾರ್ಯಕ್ರಮ, ಭಜನೆ, ಜಾಗರಣೆಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರೀರಾಮ ದೇವರಿಗೆ ಕ್ರತಜ್ಞತಾಭಾವ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net