

ಕಾರವಾರ: ನೆರೆ ಮನೆಯ ಮಹಿಳೆ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿ, ಮಾನಕ್ಕೆ ಕುಂದಾಗುವಂತೆ ವರ್ತಿಸಿದ ಅಪರಾಧಿಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯವು 3 ವರ್ಷ ಸಾದಾ ಸೆರೆವಾಸ ಹಾಗೂ ರೂ. 5000 ದಂಡ ವಿಧಿಸಿ ತೀರ್ಪು ನೀಡಿದೆ.
ಹಳಗಾದ ಆಶೀಸ್ ಮಿನಿನ್ ಫರ್ನಾಂಡೀಸ್ ಶಿಕ್ಷೆಗೊಳಗಾದವ. ಬೇರೆ ಪ್ರಕರಣವೊಂದರಲ್ಲಿ 10 ವರ್ಷ ತಲೆಮರೆಸಿಕೊಂಡಿದ್ದ ಶಶಿಶ್‌ನನ್ನು ಚಿತ್ತಾಕುಲಾ ಠಾಣೆ ಪೊಲೀಸರು 2020 ರಲ್ಲಿ ಹುಡುಕಿ ಗೋವಾದ ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಪಕ್ಕದ ಮನೆಯವರು ತನ್ನ ಇರುವಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದುಕೊಂಡ ಶಶಿಶ್ ಅವರ ಜತೆ ಜಗಳ ಮಾಡಿ, ಹಲ್ಲೆ ಮಾಡಿದ್ದ. ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐಗಳಾದ ಪ್ರವೀಣಕುಮಾರ್ ಆರ್.ಹಾಗೂ ಮಂಜುನಾಥ ಎಚ್.ಎಸ್.ನಾಯ್ಕ ಅವರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ 2 ನೇ ನ್ಯಾಯಾಲಯದ ನ್ಯಾಯಾಧೀಶ ಧನರಾಜ್.ಎಸ್.ಎಂ. ಅವರು ವಿಚಾರಣೆ ನಡೆಸಿದ್ದು, ಅಪರಾಧ ಸಾಬೀತಾದ ಕಾರಣ ತೀರ್ಪು ಪ್ರಕಟಿಸಿದ್ದಾರೆ. ಅಪರಾಽ ತುಂಬುವ ದಂಡವನ್ನು ಸಂತ್ರಸ್ತೆಗೆ ಪರಿಹಾರ ರೂಪದಲ್ಲಿ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಆಭಿಯೋಜಕ ಎಸ್.ಬಿ.ಮುಲ್ಲಾ ಹಾಗೂ ವೆಂಕಟೇಶ.ಕೆ.ಗೌಡ ವಾದ ಮಂಡಿಸಿದ್ದರು.
ಇದನ್ನೂ ಓದಿ: ಮಕ್ಕಳ ಕೈಯ್ಯಲ್ಲಿ ಮೂಡಿದ ಉತ್ತರ ಕನ್ನಡದ ವೈವಿಧ್ಯತೆ