

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಸಾಬರಕಟ್ಟೆ-ಶಿರಿಯಾರ ಜೈಗಣೇಶ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಧ್ಯಕ್ಷ ಅಶೋಕ್ ಪ್ರಭು ಅಧ್ಯಕ್ಷತೆಯಲ್ಲಿ ಸಾಬರಕಟ್ಟೆ ಜಿಎಸ್‌ಬಿ ಸಭಾಭವನದಲ್ಲಿ ಜರುಗಿತು.
ಸಂಘ ಪ್ರಸಕ್ತ ಸಾಲಿನಲ್ಲಿ 1.09 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.13.50 ಡಿವಿಡೆಂಡ್ ಘೋಷಿಸಲಾಯಿತು. ನಿವ್ವಳ ಲಾಭದಲ್ಲಿ ಸೈನಿಕ ಕಲ್ಯಾಣ ನಿಧಿಗೆ ಶೇ.0.50, ವಿಕಲಾಂಗರ ಆಶ್ರಮಗಳಿಗೆ ಶೇ.1.00 ಹಾಗೂ ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟಕ್ಕೆ ಶೇ.0.50 ದೇಣಿಗೆ ನೀಡಲು ಸರ್ವಾನುಮತದಿಂದ ನಿರ್ಣಯಿಸಲಾಯಿತು. ಸಂಸ್ಥೆಯ ಸದಸ್ಯರ ಪ್ರತಿಭಾನ್ವಿತ 21ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ, 5 ಜನ ಅಶಕ್ತ ಸದಸ್ಯರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು. ಸಂಸ್ಥೆಯ ಚೈತನ್ಯ ನಿಧಿಯಿಂದ ಸ್ಪಂದನ ಸ್ಕೂಲ್ ಮತ್ತು ಶ್ರೀ ಕೃಷ್ಣ ಚಾರಿಟೆಬಲ್ ಟ್ರಸ್ಟ್‌ಗೆ ದೇಣಿಗೆ ವಿತರಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ಸಿಎ ಪದವಿ ಪಡೆದ ವೈಷ್ಣವಿ ಪೈ, ವಿಕ್ರಮ್ ಎನ್.ಪೈ, ಸುದನ್ವ ಶ್ಯಾನುಭಾಗ್, ವೈದ್ಯಕೀಯ ಪದವಿ ಪಡೆದ ವಿಜೇತಾ ಹಾಗ ಇಂಜಿನೀಯರಿಂಗ್‌ನಲ್ಲಿ ರ‌್ಯಾಂಕ್ ಗಳಿಸಿದ ಚೇತನಾ ಆರ್.ಕಿಣಿ ಅವರನ್ನು ಗೌರವಿಸಲಾಯಿತು.
ಸಂಘ ಉಪಾಧ್ಯಕ್ಷ ಎಚ್.ನಾರಾಯಣ ಶೆಣೈ, ಹಿರಿಯ ಸದಸ್ಯರಾದ ನರಸಿಂಹ ಹೆಗ್ಡೆ ಸಾಬರಕಟ್ಟೆ, ಎಂ.ಉಪೇಂದ್ರ ಕಿಣಿ, ಸ್ಥಾಪಕ ಅಧ್ಯಕ್ಷ ಎಸ್.ಪ್ರಭಾಕರ ನಾಯಕ್, ಹಿರಿಯ ಸಹಕಾರಿ ಬಿ.ಗೋಪಾಲಕೃಷ್ಣ ಪೈ.ಬೈದೆಬೆಟ್ಟು, ನಿರ್ದೇಶಕರಾದ ರಾಘವೇಂದ್ರ ಹೆಗ್ಡೆ, ಎಸ್.ವೆಂಕಟೇಶ ಪೈ., ವೈ.ರಾಘವೇಂದ್ರ ಪ್ರಭು, ಪಲ್ಲವಿ ವೈ.ನಾಯಕ್, ಸುನೀತಾ ಹೆಗ್ಡೆ, ಸಿಬ್ಬಂದಿ ಸೌಮ್ಯಾ ಮಲ್ಯ, ದಿನೇಶ್ ಭಟ್, ಸಂಪತ್ ನಾಯಕ್, ಚೈತ್ರಾ ಶೆಣೈ, ವಿಘ್ನೇಶ್ ಹೆಗ್ಡೆ, ಸದಸ್ಯರು, ಗ್ರಾಹಕರು ಉಪಸ್ಥಿತರಿದ್ದರು.
ವಿಭಾ ವಿ.ಪೈ ಪ್ರಾರ್ಥಿಸಿದರು. ನಿರ್ದೇಶಕ ಯು.ಪ್ರಸಾದ ಭಟ್ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಾನಂದ ಶ್ಯಾನುಭಾಗ್ ಎತ್ತಿನಟ್ಟಿ ವರದಿ ವಾಚಿಸಿದರು. ನಿರ್ದೇಶಕ ಮಾಧವ ಹೆಗ್ಡೆ ನಿರೂಪಿಸಿದರು. ನಿರ್ದೇಶಕ ರವೀಂದ್ರನಾಥ್ ಕಿಣಿ ವಂದಿಸಿದರು.