

ಬೈಂದೂರು: ಶಿರೂರು ದಾಸನಾಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ವತಿಯಿಂದ ನಡೆದ 37ನೇ ವರ್ಷದ ಶಾರದೋತ್ಸವ ಸವಾರಂಭದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಿ.ಎನ್.ಬಿಲ್ಲವ ಅವರನ್ನು ಸನ್ಮಾನಿಸಲಾಯಿತು. ಅನ್ನದಾನ ಸೇವಾಕರ್ತರಾದ ಲಕ್ಷ್ಮೀ ಕುಷ್ಟು ಪೂಜಾರಿ ಮತ್ತು ಮಕ್ಕಳು ಅಳ್ವೆಗದ್ದೆ ಹಾಗೂ ಕೊಡುಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.
ದೇವಸ್ಥಾನ ಆಡಳಿತ ಮೊಕ್ತೇಸರ ಎಸ್.ನಾಗಯ್ಯ ಶೆಟ್ಟಿ ಹೊಸ್ಮನೆ, ಶಾರದೋತ್ಸವ ಸಮಿತಿ ಅಧ್ಯಕ್ಷ ಅರುಣ್‌ಕುವಾರ್ ಶೆಟ್ಟಿ, ವಾಜಿ ಅಧ್ಯಕ್ಷ ರಾವೇಂದ್ರ ಶೆಟ್ಟಿ ಶಿರೂರು, ಸದಸ್ಯರಾದ ಅಶೋಕ ಕುವಾರ್ ಶೆಟ್ಟಿ ಕಾರಿಕಟ್ಟೆ, ವಾಧವ ಬಿಲ್ಲವ ಕಾಳನಮನೆ, ಶಂಕರ ಬಿಲ್ಲವ, ರವೀಂದ್ರ ಶೆಟ್ಟಿ ಆರ‌್ಮಕ್ಕಿ, ಕಾರ್ಯದರ್ಶಿ ನಂದಕುವಾರ್, ದಾಮೋದರ ಶೆಟ್ಟಿ, ಮಹಾದೇವ ಬಿಲ್ಲವ, ರವಿದಾಸ್ ಮೊಗೇರ್, ಕಿಶೋರ್‌ಕುವಾರ್ ಹಾಗೂ ಸಮಿತಿ ಸದಸ್ಯರು ಹಾಜರಿದ್ದರು.