ಪ್ರಗತಿ ಪಥದತ್ತ ನಮ್ಮ ಸಂಸ್ಥೆ : ಅಶೋಕ್ ಪ್ರಭು ಅಭಿಮತ ; ಜೈಗಣೇಶ್ ಸಹಕಾರಿ ಸಂಘ ಕಟ್ಟಡ ಶಿಲಾನ್ಯಾಸ

stone
ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಶಿರಿಯಾರ ಸಾಬ್ರಕಟ್ಟೆ ಸ್ವಂತ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಶಿರಿಯಾರ ಸಾಬ್ರಕಟ್ಟೆ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಸ್ವಂತ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.
ಸಂಸ್ಥೆ ಅಧ್ಯಕ್ಷ ಅಶೋಕ್ ಪ್ರಭು ಸಾಬ್ರಕಟ್ಟೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಎಲ್ಲರ ಸಹಕಾರದೊಂದಿಗೆ 17 ವರ್ಷ ಹಿಂದೆ ಪ್ರಾರಂಭವಾದ ಸಂಸ್ಥೆ ಯಶಸ್ವಿಯಾಗಿ ಪ್ರಗತಿಪಥದಲ್ಲಿ ಸಾಗುತ್ತಿದ್ದು, ಬಹುದಿನದ ಕನಸಾದ ಸಂಸ್ಥೆಗೆ ಸುಸಜ್ಜಿತವಾದ ಸ್ವಂತ ಕಟ್ಟಡ ನಿರ್ಮಾಣದ ಶುಭ ಘಳಿಗೆ ಇದೀಗ ಕೂಡಿಬಂದಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಸಹಕಾರ, ಮಾರ್ಗದರ್ಶನ ಇನ್ನು ಮುಂದೆ ಇರಲಿ ಎಂದರು.

ಪುರೋಹಿತ ಮಹೇಶ್ ಭಟ್ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ಸಂಘ ಉಪಾಧ್ಯಕ್ಷ ಗಾವಳಿ ನಾರಾಯಣ ಶೆಣೈ, ನಿರ್ದೇಶಕರಾದ ಶಿರಿಯಾರ ಪ್ರಭಾಕರ ನಾಯಕ್, ಮಾಧವ ಹೆಗ್ಡೆ ಮಧುವನ, ರವೀಂದ್ರನಾಥ ಕಿಣಿ ಸಾಬ್ರಕಟ್ಟೆ, ರಾಘವೇಂದ್ರ ಹೆಗ್ಡೆ, ವೆಂಕಟೇಶ್ ಪೈ ಸಾಸ್ತಾನ, ಪಲ್ಲವಿ ನಾಯಕ್ ಕಲ್ಮರ್ಗಿ, ಯು.ಪ್ರಸಾದ್ ಆರ್.ಭಟ್, ರಾಘವೇಂದ್ರ ಪ್ರಭು ಗುಡ್ಡೆಯಂಗಡಿ, ಜಗದೀಶ್ ಹೆಗ್ಡೆ ಎತ್ತಿನಟ್ಟಿ, ಜಿ.ಎಸ್.ಬಿ.ಸಂಘದ ಪ್ರಮುಖರು, ಸಂಸ್ಥೆ ಸದಸ್ಯರು ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಾನಂದ ಶ್ಯಾನುಭಾಗ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net