ಜಡ್ಕಲ್ ಸಹಕಾರಿ ಸಂಘದ ಕೊಠಡಿ ಉದ್ಘಾಟನೆ

co society
ಜಡ್ಕಲ್ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಸಹಕಾರಿ ಸಂಫದ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ. ಅವರನ್ನು ಸನ್ಮಾನಿಸಲಾಯಿತು
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಜಡ್ಕಲ್ ವಿವಿಧೋದ್ದೇಶ ಸಹಕಾರಿ ಸಂಘದ ಬ್ಯಾಂಕಿಂಗ್ ವಿಭಾಗದ ನೂತನ ಭದ್ರತಾ ಕೊಠಡಿಯನ್ನು ಶುಕ್ರವಾರ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ರಾಜು ಪೂಜಾರಿ ಉದ್ಘಾಟಿಸಿದರು. ಸಹಕಾರಿ ಸಂಘದ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ. ಅವರು ಸೇಫ್ ಲಾಕರ್, ಜಡ್ಕಲ್ ಚರ್ಚ್ ಧರ್ಮಗುರು ಮಾಣಿ ವಿ.ಎಂ. ಅವರು ಚಿನ್ನ ತೂಕದ ಯಂತ್ರ ಉದ್ಘಾಟಿಸಿದರು.

ಸಂಘದ ಅಧ್ಯಕ್ಷ ಸೈಮನ್ ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಸಂಘದ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ. ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಮೊಳಹಳ್ಳಿ ಮಹೇಶ್ ಹೆಗ್ಡೆ, ಜಡ್ಕಲ್ ಗ್ರಾಪಂ ಅಧ್ಯಕ್ಷೆ ಪಾರ್ವತಿ ಬೆಳಾರಿ, ಜಡ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಜಡ್ಕಲ್ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ಸಂತೋಷ್ ನಾಯ್ಕ, ನಿರ್ದೇಶಕರಾದ ಜೋಸೆಫ್ ಕೆ. ಜೆ., ಅಂತೋನಿ ಕೆ.ಎಂ., ಚಂದ್ರ ಪೂಜಾರಿ ಸೆಳ್ಕೊಡು, ಜೇಕಬ್, ಸಜಿ ಕೆ., ಚಂದ್ರ ಬೆಳಾರಿ, ಲಕ್ಷ್ಮಿ, ಸಿಸಿಲಿ ಜೋನ್ಸನ್ ಹಾಗೂ ಪಂಚಾಯಿತಿ ಸದಸ್ಯರು, ಜಡ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಲಿ ಕೆ.ಬಿ. ನಿರೂಪಿಸಿದರು. ಸಂಸ್ಥೆ ಸಿಬ್ಬಂದಿ ಸುಚೇತನ್ ಬಿಲ್ಲವ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net