ಜೈಭೀಮ್ ಗೀತೆಗಳಿಗೆ ಮಹಿಳೆಯರಿಂದ ಹೆಜ್ಜೆ

06-jan-hdl-01-2024
ಹೂವಿನಹಡಗಲಿಯಲ್ಲಿ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಭೀಮಾ ಕೊರೆಗಾವ್ ಯುದ್ಧದ ವಿಜಯೋತ್ಸವದ ನೆನಪಿಗಾಗಿ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಸಿದರು.
Published on

ಹೂವಿನಹಡಗಲಿ: ಪಟ್ಟಣದಲ್ಲಿ ವಿವಿಧ ದಲಿತಪರ ಸಂಘಟನೆಗಳಿಂದ ಭೀಮಾ ಕೊರೆಗಾವ್ ಯುದ್ಧದ ವಿಜಯೋತ್ಸವದ ನೆನಪಿಗಾಗಿ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಶನಿವಾರ ಅದ್ದೂರಿಯಾಗಿ ನಡೆಯಿತು.

ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಮದಲಘಟ್ಟ ವೃತ್ತ, ಓಂ ವೃತ್ತ, ಶಾಸ್ತ್ರೀ ವೃತ್ತ ಮಾರ್ಗವಾಗಿ ಸಂಚಾರಿಸಿ ಅಂಡಬೇಡ್ಕರ್ ವೃತ್ತದಲ್ಲಿ ಕೊನೆಗೊಂಡಿತು. ವಿವಿಧ ಸಂಘಟನೆಗಳು ಮುಖಂಡರು ಅಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆಯನ್ನು ಮುಕ್ತಾಯಗೊಳಿಸಿದರು. ಯುವಕರು ಅಂಬೇಡ್ಕರ್ ಭಾವಚಿತ್ರ ಹಿಡಿದು ಕುಣಿದು ಕುಪ್ಪಳಿಸಿದರು. ಯುವತಿಯರು ಮತ್ತು ಮಹಿಳೆಯರು ಜೈಭೀಮ್ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ

ಬಾಬು ಜಗಜೀವನರಾಮ್ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಆನಂದ ಬಿ, ದಲಿತ ಸೇನೆ ಅಧ್ಯಕ್ಷ ಸಿ.ದುರುಗೇಶ್, ಜೈಭೀಮ್ ಒಕ್ಕೂಟದ ತಾಲೂಕು ಅಧ್ಯಕ್ಷ ಸಂತೋಷ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕಿ ಕೆ.ಲಲಿತಮ್ಮ, ಗಾಳ್ಳೆಮ್ಮ ಕಮಿಟಿ ಅಧ್ಯಕ್ಷ ನಿಂಗಪ್ಪ, ಎಎಸ್‌ಎಸ್‌ಕೆ ತಾಲೂಕು ಅಧ್ಯಕ್ಷ ಎ.ಬರಮಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net