ಲಾರಿ-ಕಾರು ನಡುವೆ ಅಪಘಾತ: ಸಚಿವ ಜಗದೀಶ್ ಶೆಟ್ಟರ್ ಪುತ್ರ, ಸೊಸೆ ಆಸ್ಪತ್ರೆಗೆ ದಾಖಲು

Accident
Published on

ದಾವಣಗೆರೆ: ಸಚಿವ ಜಗದೀಶ್​ ಶೆಟ್ಟರ್​ ಅವರ ಪುತ್ರ ಹಾಗೂ ಸೊಸೆ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಘಟನೆ ದಾವಣಗೆರೆಯ ಹಳೇ ಕುಂದುವಾಡ ಬಳಿಯ ಎನ್​ಎಚ್​-4ನಲ್ಲಿ ಮಂಗಳವಾರ ನಡೆದಿದೆ.

ಡಿವೈಡರ್ ಬಳಿ ಲಾರಿ ಹಾಗೂ ಲ್ಯಾಂಡ್ ರೋವರ್ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಶೆಟ್ಟರ್​ ಪುತ್ರ ಪ್ರಶಾಂತ್ ಶೆಟ್ಟರ್, ಸೊಸೆ ಅಂಚಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕನಿಗೂ ಗಾಯಗಳಾಗಿವೆ.

ಗಾಯಗಳುಗಳನ್ನು ಸದ್ಯ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ದಾವಣಗೆರೆಯಿಂದ ಹುಬ್ಬಳ್ಳಿ ನಿವಾಸಕ್ಕೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಸ್ಥಳಕ್ಕೆ ದಕ್ಷಿಣ ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಕಿರಣಕುಮಾರ್ ಭೇಟಿ ನೀಡಿ ಪರಿಶೀಲ‌ನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಪ್ರಾಥಮಿಕ ಚಿಕಿತ್ಸೆ ಪಡೆದು ಜಗದೀಶ್ ಶೆಟ್ಟರ್ ಪುತ್ರ ಹಾಗೂ ಸೊಸೆ ಹುಬ್ಬಳ್ಳಿಗೆ ತೆರಳಿದ್ದಾರೆಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net