ಜನರ ಮನ ಗೆದ್ದ ಹಲಸು ಮೇಳ : ದುಬಾರಿಯಾದರೂ ಮುಗಿಬಿದ್ದ ಗ್ರಾಹಕರು : ನಿರಂತರ ಆಯೋಜನೆ ಯೋಚನೆ

New Project (17)
Published on

ವಿಜಯಮಾಣಿ ಸುದ್ದಿಜಾಲ ಉಳ್ಳಾಲ

ಉಳ್ಳಾಲ ತಾಲೂಕಿಲ್ಲಿ ಪ್ರಥಮ ಬಾರಿಗೆ ನಡೆದ ಹಲಸು ಮೇಳ ಅಭೂತಪೂರ್ವ ಯಶಸ್ಸು ಕಂಡಿದೆ. ಮೇಳದಲ್ಲಿ ವಸ್ತುಗಳಿಗೆ ದುಬಾರಿ ಬೆಲೆ ಇದ್ದರೂ ಗ್ರಾಹಕರು ಮುಗಿಬಿದ್ದು ಖರೀದಿಸಿದ್ದಾರೆ. ಪ್ರಥಮ ಪ್ರಯತ್ನ ಯಶಸ್ಸಿನಿಂದ ಬೀಗಿರುವ ಪ್ರಮುಖ ಆಯೋಜಕರಾದ ಕೋಟೆಕಾರ್ ವ್ಯವಸಾಯ ಸೇಮಾ ಸಹಕಾರ ಬ್ಯಾಂಕ್ ಮುಂದಿನ ವರ್ಷಗಳಲ್ಲಿ ನಿರಂತರ ಮೇಳ ಆಯೋಜನೆಗೆ ಯೋಚಿಸಿದೆ.

ಹಲಸಿನ ಮೇಳದ ಪ್ರಯುಕ್ತ ಸಾರ್ವಜನಿಕರನ್ನು ಆಕರ್ಷಿಸಲು ವಿವಿಧ ಸ್ಟಾಲ್‌ಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಹೆಚ್ಚಿನ ಸ್ಟಾಲ್‌ಗಳು ತಿಂಡಿ ತಿನಸುಗಳದ್ದೇ ಆಗಿದ್ದವು. ಹಲಸಿನಿಂದ ತಯಾರಿಸಲಾದ ಮಂಚೂರಿ, ಚಿಲ್ಲಿ, ಜಿಲೇಬಿ, ಗರಿಕೆ, ಬಿರಿಯಾನಿ, ಹಲ್ಮಾ ಗ್ರಾಹಕರ ಗಮನ ಸೆಳೆಯುವಲ್ಲಿ ಸಫಲಮಾಯಿತು.

ಮೊದಲ ದಿನವೇ ಜನಜಂಗುಳಿ: ದ.ಕ.ಜಿಲ್ಲೆ ವಿವಿಧ ಭಾಗಗಳಲ್ಲಿ ಕೆಲವು ವರ್ಷಗಳಿಂದ ಹಲಸು ಮೇಳ ನಡೆಸಲಾಗುತ್ತಿದೆ. ಆದರೆ ಉಳ್ಳಾಲ ತಾಲೂಕಿನಲ್ಲಿ ಪ್ರಥಮ ಬಾರಿಗೆ ಹಲಸು ಮೇಳ ಆಯೋಜಿಸಲಾಗಿದ್ದು ಜಿಲ್ಲೆಯ ಕಡೆಯ ಮೇಳವೂ ಆಗಿದೆ. ಈ ಹಿನ್ನೆಲೆ ತಾಲೂಕಿನ ಜನರಿಂದಲೇ ಭಾರಿ ಸ್ಪಂದನೆ ವ್ಯಕ್ತಮಾಗಿದ್ದು ಜತೆಗೆ ಇತರ ತಾಲೂಕುಗಳಿಂದಲೂ ಜನ ಭಾಗವಹಿಸಿದ್ದರು. ಮೊದಲ ದಿನದ ಆರಂಭದಲ್ಲಿ ಜನ ಕಡಿಮೆಯಿದ್ದರೂ ಬಳಿಕ ರಾತ್ರಿ 10ರವರೆಗೂ ಸಭಾಂಗಣ ತುಂಬಿತ್ತು. ಶನಿಮಾರ ವಿವಿಧ ಶಾಲೆಗಳ ಶಿಕ್ಷಕರು, ಮಕ್ಕಳು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದರೆ, ಭಾನುಮಾರ ರಜಾದಿನಮಾಗಿದ್ದರಿಂದ ಕುಟುಂಬ ಸಮೇತ ಭೇಟಿ ನೀಡಿ ವಿವಿಧ ಖಾದ್ಯ ಸವಿದು ಮನೆಗೆ ಕೊಂಡೊಯ್ದರು.

ಉಳ್ಳಾಲ ತಾಲೂಕಿನಲ್ಲಿ ಪ್ರಥಮ ಬಾರಿಗೆ ಹಲವು ಮೇಳ ಹಮ್ಮಿಕೊಂಡು ಇತರ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದೆ. ಇದರಿಂದ ಕೃಷಿಕರಿಗೂ ಹುಮ್ಮಸ್ಸು ಬಂದಿದ್ದು ಮುಂದಿನ ದಿನದಲ್ಲಿ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂಥ ಮೇಳ ನಡೆಸಲು ಯೋಚಿಸಲಾಗುವುದು. ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು, ಅಧ್ಯಕ್ಷ, ಕೋಟೆಕಾರ್ ವ್ಯವಸಾಯ ಸೇಮಾ ಸಹಕಾರ ಬ್ಯಾಂಕ್ ಮೂರು ದಿನಕ್ಕೆ ಎಂಟು ಸಾವಿರ ಬಾಡಿಗೆ ಕೊಟ್ಟಿದ್ದು ನಷ್ಟ ಆಗಿಲ್ಲ. ವ್ಯಾಪಾರ ಚೆನ್ನಾಗಿ ನಡೆದಿದೆ. ಬಂದವರು ಬಿಸಿ ಜಿಲೇಬಿ ಸೇವಿಸಿ ಮನೆಗೂ ಕೊಂಡೊಯ್ದಿದ್ದಾರೆ, ಇಂಥ ಮೇಳಗಳ ಬಗ್ಗೆ ಆತ್ಮವಿಶ್ಮಾಸ ಮೂಡಿದೆ. ದೀಪಕ್ ಶೆಟ್ಟಿ ಕುಂದಾಪುರ, ಹಲಸು ಜಿಲೇಬಿ ಸ್ಪೆಷಲಿಸ್ಟ್ ಮೊದಲ ದಿನ ಬಂದಿರಲಿಲ್ಲ, ಎರಡನೇ ದಿನ ಐದು ಕೆಜಿ ಬಿರಿಯಾಣಿ ಮಧ್ಯಾಹ್ನವೇ ಖಾಲಿಯಾಗಿವೆ. ಭಾನುಮಾರ ಏಳು ಕೆಜಿ ಮಾಡಿದ್ದು ಮಧ್ಯಾಹ್ನ ಖಾಲಿಯಾಗಿದೆ. ಹಲಸು ಮಂಚೂರಿ, ಕಬಾಬ್ ಇತರ ವಿಶೇಷ ಉತ್ಪನ್ನಗಳಿಗೆ ಉತ್ತಮ ಸ್ಪಂದನೆ ಲಭಿಸಿದೆ. ಜಯಶ್ರೀ ಕುಂದಾಪುರ, ಹಲಸು ಬಿರಿಯಾಣಿ ಸ್ಪೆಷಲಿಸ್ಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net