ಬಂಜೆತನ ಎದುರಿಸುತ್ತಿರುವ ದಂಪತಿಗಳಿಗೆ ಐವಿಎಫ್ ಭರವಸೆಯ ಕಿರಣ

IVF
Published on

ಬೆಂಗಳೂರು: ಬಂಜೆತನ ಸಮಸ್ಯೆ ಎದುರಿಸುತ್ತಿರುವ ದಂಪತಿಗೆ ತಮ್ಮದೇ ಮಗು ಹೊಂದಲು ನೆರವಾಗುವ ಸುಧಾರಿತ ಲವತ್ತತೆ ಚಿಕಿತ್ಸೆಯೇ ಐವಿಎಫ್ (ಇನ್ ವಿಟ್ರೋ ಫರ್ಟಿಲೈಸೇಶನ್) ಆಗಿದೆ. ಆಧುನಿಕ ಕಾಲಘಟ್ಟದಲ್ಲಿ ಮಕ್ಕಳನ್ನು ಹೊಂದಲು ಈ ಚಿಕಿತ್ಸಾ ವಿಧಾನ ವರವಾಗಿ ಪರಿಗಣಮಿಸಿದೆ. ಕಳೆದ ನಾಲ್ಕೂವರೆ ದಶಕಗಳಲ್ಲಿ ಜಗತ್ತಿನಾದ್ಯಂತ ಕೋಟ್ಯಂತರ ದಂಪತಿಗಳು ಐವಿಎಫ್ ಚಿಕಿತ್ಸಾ ವಿಧಾನದಿಂದ ಮಕ್ಕಳನ್ನು ಪಡೆದುಕೊಂಡಿದ್ದಾರೆ.

ಜೀವನಶೈಲಿ, ವೈದ್ಯಕೀಯ ಅಥವಾ ಅನುವಂಶಿಕ ಸಮಸ್ಯೆಗಳು ಬಂಜೆತನಕ್ಕೆ ಕಾರಣವಾಗಿರಬಹುದು. ಈ ಕುರಿತು ಫಲವತ್ತತೆ ತಜ್ಞರಲ್ಲಿ ತಪಾಸಣೆ ಮಾಡಿಸಿ, ರೋಗನಿರ್ಣಯ ಮತ್ತು ಚಿಕಿತ್ಸೆ ಮಾಡಿಸಿಕೊಂಡಲ್ಲಿ ಮಗುವನ್ನು ಹೊಂದಬಹುದಾಗಿದೆ. ಬಂಜೆತನ ಸಮಸ್ಯೆ ಎದುರಿಸುತ್ತಿರುವ ದಂಪತಿಗಳಿಗೆ ಇದು ಭರವಸೆಯ ಕಿರಣವಾಗಿದೆ.

ಅನುವಂಶಿಕ ಅಸ್ವಸ್ಥತೆ, ನಾನಾ ಕಾರಣಗಳಿಂದ ಎದುರಾಗುವ ಎಂಡೊಮೆಟ್ರೊಯೊಸಿಸ್, ಗರ್ಭಾಶಯದ ತೊಂದರೆಗಳು, ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ (ಪಿಸಿಒಎಸ್), ಅಸಹಜ ವೀರ್ಯ ಉತ್ಪಾದನೆ, ಕಳಪೆ ವೀರ್ಯ ಇತ್ಯಾದಿ ಬಂಜೆತನದ ಹಿಂದಿರುವ ಕಾರಣಗಳಾಗಿವೆ. ಬಂಜೆತನದಿಂದ ಸಂಕಟಪಡುತ್ತಿರುವ ದಂಪತಿಗೆ ಐವಿಎಫ್ ವರದಾನವಾಗಿದೆ.

ವಿಶ್ವ ಐವಿಎಫ್ ದಿನ: ವಿಶ್ವದ ಮೊದಲ ಟೆಸ್ಟ್ ಟ್ಯೂಬ್ ಬೇಬಿ ಲೂಯಿಸ್ ಬ್ರೌನ್ 1978ರ ಜು. 25ರಂದು ಜನಿಸಿದ್ದು, ಐವಿಎಫ್ ತಂತ್ರದ ಮೂಲಕ ಮೊದಲ ಮಗು ಜನಿಸಿದ ದಿನವನ್ನು ಆಚರಿಸಲು ಈ ದಿನವನ್ನು ವಿಶ್ವ ಐವಿಎಫ್ ದಿನ ಎಂದು ಘೋಷಿಸಲಾಯಿತು. ಅದರಂತೆ ಪ್ರತಿ ವರ್ಷ ಜು. 25ರಂದು ಐವಿಎಫ್ ದಿನ ಆಚರಿಸಲಾಗುತ್ತದೆ.

ಅನುವಂಶಿಕ ಅಸ್ವಸ್ಥತೆಗಳು, ನಾನಾ ಕಾರಣಗಳಿಂದ ಎದುರಾಗುವ ಎಂಡೊಮೆಟ್ರೊಯೊಸಿಸ್, ಗರ್ಭಾಶಯದ ತೊಂದರೆಗಳು, ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ (ಪಿಸಿಒಎಸ್), ಅಸಹಜ ವೀರ್ಯ ಉತ್ಪಾದನೆ, ಕಳಪೆ ವೀರ್ಯ ಇತ್ಯಾದಿ ಬಂಜೆತನದ ಹಿಂದಿರುವ ಕಾರಣಗಳಾಗಿವೆ. ಬಂಜೆತನದಿಂದ ಸಂಕಟಪಡುತ್ತಿರುವ ದಂಪತಿಗೆ ಐವಿಎಫ್ ವರದಾನವಾಗಿದೆ. ಅಂಕಿ ಅಂಶಗಳ ಪ್ರಕಾರ ಕಳೆದ ನಾಲ್ಕುವರೆ ದಶಕಗಳಲ್ಲಿ ಒಂದು ಕೋಟಿ ಅಧಿಕ ಶಿಶುಗಳು ಐವಿಎಫ್ ಮೂಲಕ ಜನಿಸಿವೆ ಎನ್ನಲಾಗಿದೆ.

ಐವಿಎಫ್ ಎಂದರೇನು? ಐವಿಎಫ್ (ಇನ್ ವಿಟ್ರೋ ಫರ್ಟಿಲೈಸೇಶನ್) ಇದೊಂದು ರೀತಿ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ. ಮಹಿಳೆಯ ಅಂಡಾಶಯದಿಂದ ಸಂಗ್ರಹಿಸಲಾಗುವ ಮೊಟ್ಟೆಗಳನ್ನು ದೇಹದ ಹೊರಗಿನ ಪ್ರಯೋಗಾಲಯದಲ್ಲಿ ವೀರ್ಯದೊಂದಿಗೆ ಫಲವತ್ತಾಗಿಸಲಾಗುತ್ತದೆ. ಲೀಕರಣದ ಕೆಲವು ದಿನಗಳ ನಂತರ ಲವತ್ತಾದ ಮೊಟ್ಟೆಯನ್ನು ಭ್ರೂಣ ಎಂದು ಕರೆಯಲಾಗುತ್ತದೆ. ಹೀಗೆ ರೂಪುಗೊಂಡ ಭ್ರೂಣವನ್ನು ಹೆಪ್ಪುಗಟ್ಟಿಸಿ ಅದನ್ನು ಗರ್ಭಾಶಯದೊಳಗೆ ಇರಿಸಲಾಗುತ್ತದೆ. ಈ ವಿಧಾನವನ್ನು ಬಾಡಿಗೆಗೆ (ಲವಂತಿಕೆಯ ಸಮಸ್ಯೆಗಳಿರುವ ದಂಪತಿಗಳಿಗೆ ಮಗುವನ್ನು ಹೆತ್ತುಕೊಡುವ ಮಹಿಳೆ) ಸಹ ನಿರ್ವಹಿಸಬಹುದಾಗಿದೆ.

ಐವಿಎಫ್ ಯಾರಿಗೆ ಅಗತ್ಯ?:ಕಡಿಮೆಯಾದ ಅಂಡಾಶಯದ ಕಾರ್ಯ, ಫಾಲೋಪಿಯನ್ ನಿರ್ಬಂಧಿತ ಟ್ಯೂಬ್‌ಗಳು, ಹಾನಿಗೊಳಗಾದ ಫಾಲೋಪಿಯನ್ ಟ್ಯೂಬ್‌ಗಳು, 40 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಚಲನೆಯಲ್ಲಿ ಲವತ್ತತೆ ಕಡಿಮೆಯಾಗಿದ್ದವರು, ಗರ್ಭಾಶಯದ ೈಬ್ರಾಯ್ಡಾಗಳು, ಎಂಡೋಮೆಟ್ರಿಯೋಸಿಸ್, ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ (ಪಿಸಿಒಎಸ್), ಕಡಿಮೆ ವೀರ್ಯದ ಪ್ರಮಾಣ ಮತ್ತು ಗುಣಮಟ್ಟ, ಅನುವಂಶಿಕ ಅಸ್ವಸ್ಥತೆಗಳಿಂದ ಹಾಗೂ ವಿವರಿಸಲಾಗದ ಕಾರಣಗಳಿಂದ ಬಂಜೆತನ ಸಮಸ್ಯೆ ಹೊಂದಿದವರಿಗೆ ಐವಿಎಫ್ ಆಗತ್ಯ ಇರುತ್ತದೆ.

ಆರೋಗ್ಯ ತಪಾಸಣೆ ಅತ್ಯಗತ್ಯ: ಬಂಜೆತನ ಸಮಸ್ಯೆಗೆ ಪರಿಹಾರ ದೊರೆಯುತ್ತದಾದರೂ, ತಾಯಿಗೆ ಆರೋಗ್ಯದಲ್ಲಿ ಕೆಲ ಸಮಸ್ಯೆಗಳು ಸಹ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹಾಗಾಗಿ ಈ ಪ್ರಕ್ರಿಯೆಗೆ ಒಳಗಾಗುವ ಮುನ್ನ ಐವಿಎಫ್ ತಜ್ಞರೊಂದಿಗೆ ಆರೋಗ್ಯ ಸೇರಿ ಚಿಕಿತ್ಸಾ ವಿಧಾನ ಅದರ ಸಾಧಕ ಬಾಧಕಗಳ ಕುರಿತು ಸಮಗ್ರವಾಗಿ ಚರ್ಚಿಸುವುದು ಅತ್ಯಗತ್ಯ. ಇದು ಮಾನಸಿಕ, ದೈಹಿಕ ಹಾಗೂ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ. ಆದಾಗ್ಯೂ ಐವಿಎಫ್ ಅನೇಕ ದಂಪತಿಗಳ ಜೀವನದಲ್ಲಿ ಮತ್ತೆ ಬೆಳಕನ್ನು ತಂದಿದೆ. ಬಂಜೆತನದಿಂದ ನೊಂದಿರುವವರು ಐವಿಎಫ್ ಆಯ್ಕೆಯನ್ನು ಪರಿಗಣಿಸಬಹುದು ಎನ್ನುತ್ತಾರೆ ತಜ್ಞರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net