

ಬಿಡದಿ: ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಪಟ್ಟಣದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುವ ಕಾಲ ಸನ್ನಿತವಾಗಿದೆ.
ಹೌದು.. ಗ್ರಾಮ ಪಂಚಾಯಿತಿಯಿಂದ ಹಂತ ಹಂತವಾಗಿ ಪುರಸಭೆಯಾಗಿ ಮೇಲ್ದರ್ಜೆಗೆರಿದ್ದ ಪುರಸಭೆ ಮುಂದಿನ ದಿನಗಳಲ್ಲಿ ನಗರಸಭೆಯಾಗಿ ಬಡ್ತಿ ಹೊಂದುವ ಚಿತ್ರಣ ಗೋಚರವಾಗುತ್ತಿದ್ದು, ಈ ಸಂಬಂಧ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಪತ್ರ ವ್ಯವಹಾರ ನಡೆಯುತ್ತಿವೆ.
ಹಾಲಿ 23 ವಾರ್ಡ್ಗಳನ್ನು ಒಳಗೊಂಡಂತೆ ಪುರಸಭೆ ಕಾರ್ಯ ಚಟುವಟಿಕೆ ನಡೆಸುತ್ತಿದ್ದು, ಮೂರು ಗ್ರಾಪಂ ಪರಿಮಿತಿಗೆ ಹೊಂದಿಕೊಂಡಂತೆ ಪುರಸಭೆಯ ವಾರ್ಡ್ಗಳಿವೆ. ಇದನ್ನೇ ಮಾನದಂಡವಾಗಿಟ್ಟುಕೊಂಡು ಗ್ರಾಪಂ ವ್ಯಾಪ್ತಿಯಲ್ಲಿರುವ ಕೆಲವು ಗ್ರಾಮಗಳನ್ನು ಪುರಸಭೆಗೆ ಸೇರಿಸಿ ನಗರಸಭೆಯನ್ನಾಗಿ ಮಾಡುವ ಕಾರ್ಯ ಸದ್ದಿಲ್ಲದೆ ನಡೆದಿದೆ.
ನಗರಸಭೆಯನ್ನಾಗಿಸಲು ಸಿದ್ಧತೆ: ರಾಜ್ಯದಲ್ಲೇ ಹೆಚ್ಚು ಕರ ವಸೂಲಿ ಮಾಡುವುದು ಮಂಚನಾಯಕನಹಳ್ಳಿ ಗ್ರಾಪಂ. ಈ ಪಂಚಾಯಿತಿ ಪುರಸಭೆಯ ವಾರ್ಡ್ಗೆ ಹೊಂದಿಕೊಂಡಂತೆ ಇರುವುದರಿಂದ ಹಾಗೂ ಪಟ್ಟಣಕ್ಕೆ ಹತ್ತಿರ ಇರುವ ಕಾರಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳನ್ನು ಪುರಸಭೆಗೆ ಸೇರಿಸಲು ಯೋಜನೆ ರೂಪಿಸಲಾಗಿದೆ. ಜತೆಗೆ ಪಕ್ಕದ ಬನ್ನಿಕುಪ್ಪೆ (ಬಿ) ಗ್ರಾಪಂ ವ್ಯಾಪ್ತಿಯ ವಾಜರಹಳ್ಳಿ, ಜಡೇನಹಳ್ಳಿ ಗ್ರಾಮಗಳನ್ನೂ ನಗರಸಭೆಗೆ ಸೇರಿಸಿ ದೊಡ್ಡ ನಗರಸಭೆಯನ್ನಾಗಿಸಲು ಸಿದ್ಧತೆ ನಡೆಯುತ್ತಿದೆ. ಮಂಚನಾಯಕನಹಳ್ಳಿ ಗ್ರಾಪಂ ವ್ಯಾಪ್ತಿಗೆ ಕೈಗಾರಿಕಾ ಪ್ರದೇಶ ಸೇರಿಕೊಂಡಿದ್ದು, ದೊಡ್ಡ ಕಾರ್ಖಾನೆಗಳಿಂದ ಸಣ್ಣ ಕಾರ್ಖಾನೆಗಳವರೆಗೆ 150ಕ್ಕೂ ಹೆಚ್ಚು ಕಾರ್ಖಾನೆಗಳಿಂದ ವಾರ್ಷಿಕ 20 ಕೋಟಿ ರೂ. ಹೆಚ್ಚು ಕರ ವಸೂಲಿಯಾಗುತ್ತಿದೆ. ಇದನ್ನೇ ಗುರಿಯಾಗಿಸಿಕೊಂಡು ಇಡೀ ಗ್ರಾಮ ಪಂಚಾಯಿತಿಯನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಿದರೆ ಸಮಗ್ರ ಅಭಿವೃದ್ಧಿ ಮಾಡಬಹುದೆಂಬ ಉದ್ದೇಶವಿದೆ.
ಪತ್ರ ವ್ಯವಹಾರ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೆರಿಸಲು ಸದ್ದಿಲ್ಲದೆ ತೆರೆ ಮರೆಯಲ್ಲಿ ಕೆಲಸಗಳು ನಡೆಯುತ್ತಿವೆ. ಈ ಸಂಬಂಧ ಸದರಿ ಪ್ರದೇಶದ ಗಡಿ ವಿವರವನ್ನು ನೆಯೊಂದಿಗೆ ವರದಿ ನೀಡುವಂತೆ ತಹಸೀಲ್ದಾರ್ ಸಂಬಂಧಿಸಿದ ಇಲಾಖೆಗಳಿಗೆ ಪತ್ರ ಬರೆದಿದ್ದಾರೆ. ಇದಕ್ಕೂ ಮೊದಲು ಪುರಸಭೆಯ ಮುಖ್ಯಾಧಿಕಾರಿಗಳು ತಹಸೀಲ್ದಾರ್ಗೆ ಪತ್ರ ಬರೆದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅ.9 ರಂದು ಮಂಚನಾಯಕನಹಳ್ಳಿ, ಬನ್ನಿಕುಪ್ಪೆ (ಬಿ) ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ, ಬಿಡದಿ&1 ರ ಕಂದಾಯ ನಿರೀಕರಿಗೆ ಹಾಗೂ ತಾಲೂಕು ಮೋಜಣಿದಾರರಿಗೆ ಾಪನ ಪತ್ರ ಕಳಿಸಿ ವರದಿ ಕೇಳಿದ್ದಾರೆ. ಪರ ವಿರೋಧ ಚರ್ಚೆ ಗ್ರಾಮಗಳನ್ನು ಪಂಚಾಯಿತಿ ವ್ಯಾಪ್ತಿಯಿಂದ ನಗರಸಭೆಗೆ ಸೇರಿಸಿಕೊಳ್ಳುವ ಪ್ರಕ್ರಿಯೆಗೆ ಪರ&ವಿರೋಧ ಕೇಳಿ ಬರುತ್ತಿವೆ. ಪುರಸಭೆ ವ್ಯಾಪ್ತಿಯಲ್ಲಿನ ಜನಪ್ರತಿನಿಧಿಗಳು ಪಂಚಾಯಿತಿಗಳನ್ನು, ಗ್ರಾಮಗಳನ್ನು ಸೇರಿಸಿಕೊಂಡು ನಗರಸಭೆಯಾದರೆ ಸಮಗ್ರ ಅಭಿವೃದ್ಧಿ ಕಾಣುತ್ತದೆ ಎನ್ನುತ್ತಿದ್ದಾರೆ. ಅದೇ ಗ್ರಾಪಂ ವ್ಯಾಪ್ತಿಯಲ್ಲಿನ ಜನರು ನಮಗೆ ಗ್ರಾಪಂ ಗ್ರಾಮ ಪಂಚಾಯಿತಿಯಾಗಿಯೇ ಉಳಿದುಕೊಳ್ಳಲಿ. ನಾವು ನಮ್ಮ ಕೆಲಸ ಕಾರ್ಯಗಳಿಗೆ ಬಿಡದಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ವಿರೋಧ ವ್ಯಕ್ತಪಡಿಸಿದ್ದಾರೆ.
ಪುರಸಭೆ ಈಗಾಗಲೇ 23 ವಾರ್ಡ್ ಹೊಂದಿದ್ದು, ಅಭಿವೃದ್ಧಿಯತ್ತ ಸಾಗುತ್ತಿದೆ. ಈಗ ನಮ್ಮ ಪುರಸಭೆಗೆ ಹೊಂದಿಕೊಂಡಂತೆ ಇರುವ ಎರಡು ಗ್ರಾಮ ಪಂಚಾಯಿತಿಗಳ ಗ್ರಾಮಗಳನ್ನು ಸೇರಿಸಿಕೊಂಡು ನಗರಸಭೆಯಾಗಿ ಮಾಡಿದರೆ ಬಿಡದಿ ದೊಡ್ಡ ಪಟ್ಟಣವಾಗಿ ಹೆಚ್ಚಿನ ಅಭಿವೃದ್ಧಿ ಕಾಣುತ್ತದೆ. > ಲೋಹಿತ್ ಕುಮಾರ್, ಸ್ಥಾಯಿ ಸಮಿತಿ ಮಾಜಿ ಅಧ್ಯ ನಮ್ಮ ಗ್ರಾಪಂ ರಾಜ್ಯದಲ್ಲೆ ಮಾದರಿ ಪಂಚಾಯಿತಿಯಾಗಿದೆ. ನಮ್ಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳನ್ನು ಸೇರಿಸಿಕೊಂಡು ನಗರಸಭೆ ಮಾಡುವ ಹುನ್ನಾರ ನಡೆಯುತ್ತಿದೆ. ಗ್ರಾಪಂಗೆ ಬರುತ್ತಿರುವ ಕಂದಾಯದ ಹಣದ ಮೇಲೆ ಕೆಲವರ ಕಣ್ಣು ಬಿದ್ದಿದೆ. ನಮ್ಮ ಪಂಚಾಯಿತಿಯ ಪ್ರತಿ ಗ್ರಾಮವು ಪುರಸಭೆ ವಾರ್ಡ್ಗಳಷ್ಟೆ ಅಭಿವೃದ್ಧಿ ಕಂಡಿದೆ. ಹಾಗಾಗಿ ನಮ್ಮನ್ನು ಪಂಚಾಯಿತಿ ವ್ಯಾಪ್ತಿಯಲ್ಲೇ ಇರಲು ಬಿಡಿ. > ರವಿ ಕುಮಾರ್, ಮಂಚನಾಯಕನಹಳ್ಳಿ ಗ್ರಾಪಂ ಸದಸ್ಯ
14&ಬಿಡದಿ&1& ಬಿಡದಿ ಪುರಸಭೆ
14&ಚಿಜಿಛಚಛಜಿ&2& ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿ ಕಚೇರಿ