ನಿವೃತ್ತಿ ಬಳಿಕವೂ ಕ್ರಿಯಾಶೀಲರಾಗಿರುವುದು ಮುಖ್ಯ

BYN-June04-2-Kamala Teacher
Published on

ಬೈಂದೂರು: ನಿವೃತ್ತ ನೌಕರರು ಸಮಾನ ಹಿತಾಸಕ್ತಿ ಹೊಂದಿರುವುದರಿಂದ ವಯಸ್ಸಿನ ಕಾರಣದಿಂದ ತಮ್ಮ ಚಟುವಟಿಕೆಯಿಂದ ದೂರವಾದರೆ ಆರೋಗ್ಯ ಸಮಸ್ಯೆಯಾಗಬಹುದು. ನಿವೃತ್ತಿ ಬಳಿಕ ವಿವಿಧ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಎಲ್ಲರೊಂದಿಗೆ ಬೆರೆತು ಸದಾ ಕ್ರಿಯಾಶೀಲರಾಗಿರಬೇಕು ಎಂದು ಬವಳಾಡಿ ಹಿರಿಯ ಪ್ರಾಥಮಿಕ ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಉದ್ಯಮಿ ಜಿ.ಗೋಕುಲ್ ಶೆಟ್ಟಿ ಹೇಳಿದರು.

ಬಿಜೂರು ಗ್ರಾಮದ ಬವಳಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಶಿಕ್ಷಕಿ ಕಮಲಾ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಶಾಲೆಯ ಎಸ್‌ಡಿಎಂಸಿ, ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಿ ಮಾತನಾಡಿದರು.

ನಿವೃತ್ತ ಶಿಕ್ಷಕಿ ಕಮಲಾರನ್ನು ಶಾಲಾ ಅಧ್ಯಾಪಕ ವೃಂದದವರು ಗೌರವಿಸಿದರು. ಎಸ್‌ಡಿಎಂಸಿ ರಾಘವೇಂದ್ರ ಗಾಣಿಗ, ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಿ.ರಘುರಾಮ ಶೆಟ್ಟಿ ಗೋಳಿಕಟ್ಟೆ, ಶಾಲಾ ಮುಖ್ಯಶಿಕ್ಷಕ ಎನ್.ಕೆ.ಬಿಲ್ಲವ ಮಾತನಾಡಿದರು. ಹಳೇ ವಿದ್ಯಾರ್ಥಿಗಳು, ಪಾಲಕರು, ಅಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿಗಳು ಇದ್ದರು. ಶಿಕ್ಷಕರಾದ ರಾಘವೇಂದ್ರ ಕೆ. ನಿರೂಪಿಸಿ, ಸುನೀಲ್ ಕುಮಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net