ಉತ್ತಮ ಕಾರ್ಯಗಳ ಫಲ ಸಿದ್ಧಿ

kon-1
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಯಾವ ಲಾಪೇಕ್ಷೆ ಬಯಸದೇ ಪ್ರಕೃತಿಯು ಜೀವಿಗಳಿಗೆ ಎಲ್ಲವನ್ನೂ ನೀಡುತ್ತದೆ. ಅಂತಹ ಪ್ರಕೃತಿಗೆ ಮನುಷ್ಯ ಹಾನಿ ಮಾಡುತ್ತಾನೆ. ನಾವು ಬದುಕಿನುದ್ದಕ್ಕೂ ಮಾಡುವ ಉತ್ತಮ ಕಾರ್ಯಗಳ ಲ ನಮಗೆ ಖಂಡಿತ ಸಿಗುತ್ತದೆ ಎಂದು ಸುರತ್ಕಲ್ ಶ್ರೀ ಗೋವಿಂದದಾಸ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಪಿ.ವೆಂಕಟರಮಣ ರಾವ್ ಹೇಳಿದರು.

ವಾರಾಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಾಲ್ಕೂರಿನ ಲೋಕಬಂಧು ಪ್ರತಿಷ್ಠಾನದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಮುದ್ದೂರು ವಿ.ಎಸ್.ಎಸ್. ಶಾಲಾ ಮುಖ್ಯಸ್ಥ ಪ್ರತಾಪ್ ಹೆಗ್ಡೆ ವಾರಾಳಿ ಹಾಗೂ ಸಂಗೀತ ಗುರು ಅನುರಾಧಾ ಮಯ್ಯ ಹಿಲಿಯಾಣ ಶುಭಹಾರೈಸಿದರು.

ನಾಟಿ ವೈದ್ಯ ನೀಲಕಂಠ ವೈದ್ಯ ಮುದ್ದೂರು ಇವರನ್ನು ಸನ್ಮಾನಿಸಲಾಯಿತು. ಗುರುವಂದನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ವಿನಾಯಕ ಉಡುಪ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಶೋಭಾ ಕೆ. ಪೂಜಾರಿ, ಮಂಜುನಾಥ ಹೆಬ್ಬಾರ್ ಪೇತ್ರಿ, ವಿಶ್ವರೂಪ ಮಧ್ಯಸ್ಥ ನೀಲಾವರ, ವಿವೇಕಾನಂದ ಶೆಟ್ಟಿ ಉಪಸ್ಥಿತರಿದ್ದರು.

ಪ್ರವೀಣ್ ಪುತ್ರಾಯ ಸ್ವಾಗತಿಸಿದರು. ರಾಮಮೂರ್ತಿ ಅಡಿಗ ಸನ್ಮಾನ ಪತ್ರ ವಾಚಿಸಿದರು. ಬಾಲಕೃಷ್ಣ ಕರಬ, ಶಿವರಾಮ ಕರಬ, ಕೃಷ್ಣಮೂರ್ತಿ ಕರಬ, ದೀಪಿಕಾ ಉಡುಪ ಅತಿಥಿಗಳನ್ನು ಗೌರವಿಸಿದರು. ಪ್ರದೀಪ್ ಹೆಬ್ಬಾರ್ ವಂದಿಸಿದರು. ಸತ್ಯೇಶ್ ಉಡುಪ ಕಾರ್ಯಕ್ರಮ par ನಿರೂಪಿಸಿದರು.

ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ

ಪ್ರತಿಷ್ಠಾನದ ಶಿಬಿರಾರ್ಥಿಗಳಿಂದ ಭರತನಾಟ್ಯ, ಸಂಗೀತ, ಕಜ್ಕೆ ಶ್ರೀಕೃಷ್ಣ ಯೋಗ ಪಾರಾಯಣ ತಂಡದಿಂದ ಭಗವದ್ಗೀತೆ ಪಠಣ, ಅನಂತವಿಕ್ರಮ ಉಡುಪ ಇವರಿಂದ ಕೊಳಲು ವಾದನ ನಡೆಯಿತು. ಬೆಳಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net