ಧರ್ಮ, ಸಂಸ್ಕೃತಿ ಉಳಿಸುವುದು ನಮ್ಮ ಹೊಣೆ

udp_Aatidonji dina
Published on

ಉಡುಪಿ: ನಮ್ಮ ಹಿರಿಯರು ಆಟಿ ದಿನಗಳಲ್ಲಿ ಅಪಾರ ಕಷ್ಟ ಅನುಭವಿಸಿದ್ದರು. ಆದರೂ ಅವರೆಲ್ಲ ನಮ್ಮ ಸಂಪ್ರದಾಯ, ಆಚಾರ- ವಿಚಾರ, ಧರ್ಮ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ್ದಾರೆ. ಅವುಗಳನ್ನೆಲ್ಲ ಕಾಪಾಡುವ ಜವಾಬ್ದಾರಿ ನಮ್ಮ ಹೊಣೆ ಎಂದು ಸಮಾಜಸೇವಕಿ ನಿರುಪಮಾ ಪ್ರಸಾದ್ ಶೆಟ್ಟಿ ಅಭಿಪ್ರಾಯಪಟ್ಟರು.

ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಜನತಾ ವ್ಯಾಯಾಮ ಶಾಲೆ ಟ್ರಸ್ಟ್ ದೊಡ್ಡಣಗುಡ್ಡೆ ಉಡುಪಿ ಆಶ್ರಯದಲ್ಲಿ ಇತ್ತೀಚೆಗೆ ಮಹಿಳೆಯರಿಗಾಗಿ ಆಯೋಜಿಸಿದ್ದ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳಾ ಸದಸ್ಯರು ಮನೋರಂಜನಾ ಕೂಟದಲ್ಲಿ ಯಕ್ಷಗಾನ, ಕಂಬಳ, ತುಳುನಾಡಿನ ಜಾನಪದ ನೃತ್ಯ ಹಾಗೂ ದೈವಾರಾಧನೆಯ ನೃತ್ಯ ಪ್ರದರ್ಶಿಸಿದರು. ಉಡುಪಿ ಪರಿಸರದ 20ಕ್ಕೂ ಹೆಚ್ಚು ಮಹಿಳಾ ತಂಡಗಳು ಸಾಂಪ್ರದಾಯಿಕ 25ಕ್ಕೂ ಹೆಚ್ಚು ಬಗೆಯ ಆಟಿಯ ವೈವಿಧ್ಯಮಯ ಅಡುಗೆ, ತಿಂಡಿ-ತಿನಿಸು ತಯಾರಿಸಿ ತಂದು ಉಣಬಡಿಸಿದರು.

ಉಡುಪಿ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಪ್ರಭಾಕರ ಪೂಜಾರಿ, ಜನತಾ ವ್ಯಾಯಾಮ ಶಾಲೆ ಟ್ರಸ್ಟ್ ಅಧ್ಯಕ್ಷ ರಾಮದಾಸ್ ಶೆಟ್ಟಿ, ಉಡುಪಿ ಜಿಲ್ಲಾ ಮಹಿಳಾ ಒಕ್ಕೂಟ ಅಧ್ಯಕ್ಷೆ ಸರಳಾ ಕಾಂಚನ್, ಜಿಪಂ ವಾಜಿ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಮಹಿಳಾ ಒಕ್ಕೂಟ ಪ್ರಧಾ ಕಾರ್ಯದರ್ಶಿ ಸಹಾಯಾ ಮೇರಿ, ವಿವಿಧ ಸಂಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಡುಪಿ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮಾರತ್ನಾಕರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net