

ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ಡೆಂಘೆ ನಿಯಂತ್ರಣಕ್ಕಾಗಿ ಮುಂಜಾಗೃತಾ ಕ್ರಮವಾಗಿ ಅಪಾರ್ಟ್ಮೆಂಟ್, ಹೋಟೆಲ್, ಅಂಗಡಿಗಳು, ಗೂಡಂಗಡಿ ಹಾಗೂ ಫಾಸ್ಟ್ಫುಡ್ ಅಂಗಡಿಗಲ್ಲಿ ಸ್ವಚ್ಛತೆ ಕುರಿತು ಸರ್ವೇ ನಡೆಸಲಾಗುತ್ತಿದೆ. ಅವರೆಲ್ಲರಿಗೂ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಸೂಚನೆ ನೀಡಲಾಗುತ್ತಿದೆ ಎಂದು ನಗರಸಭಾ ಆಯುಕ್ತ ರಾಯಪ್ಪ ತಿಳಿಸಿದರು.
ಉಡುಪಿ ಸೇಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ನಗರಸಭೆಯ ವತಿಯಿಂದ ಶುಕ್ರವಾರ ಡೆಂಘೆ, ಚಿಕೂನ್ಗುನ್ಯಾ, ಮಲೇರಿಯಾ ಮತ್ತು ಪೈಲೇರಿಯಾ ಮುಂತಾದ ಸಾಂಕ್ರಮಿಕ ರೋಗಗಳ ತಡೆಗಾಗಿ ಅನುಸರಿಸಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ವಾಹಿತಿ ನೀಡುವ ಕಾರ್ಯಾಗಾರ ಮತ್ತು ಡ್ರೈ ಡೇ ಉದ್ಘಾಟಿಸಿ ಮಾತನಾಡಿದರು.
ಉಡುಪಿ ನಗರದಲ್ಲಿ ಸ್ವಚ್ಛತೆ ಕಾಪಾಡದ 171 ಅಂಗಡಿಗಳಿಗೆ ನಗರಸಭೆ ವತಿಯಿಂದ ನೋಟಿಸ್ ನೀಡಿದ್ದಲ್ಲದೆ, 7,200 ರೂ. ದಂಡವನ್ನೂ ವಸೂಲಿ ವಾಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಮನೆಯ ಸುತ್ತಮುತ್ತ ಪರಿಸರ ಸ್ವಚ್ಛತೆಯಿಂದ ಇರುವಂತೆ ಹಾಗೂ ಎಲ್ಲೂ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರಸಭೆಯ ಪರಿಸರ ಅಭಿಯಂತೆ ಸ್ನೇಹಾ ಕೆ.ಎಸ್., ಮುಖ್ಯ ಶಿಕ್ಷಕಿ, ಆರೋಗ್ಯ ನಿರೀಕ್ಷರು, ಸಿಬ್ಬಂದಿ ಇದ್ದರು.