ಶಾಸಕರು ಕೋರ್ಟ್ ಮೆಟ್ಟಿಲೇರಿರುವುದು ನ್ಯಾಯಯುತ

ಶಾಸಕರು ಕೋರ್ಟ್ ಮೆಟ್ಟಿಲೇರಿರುವುದು ನ್ಯಾಯಯುತ
Published on

ಹಾಸನ: ಸಮಸ್ತ ಕರ್ನಾಟದ ಜನತೆ ತೆರಿಗೆ ಪಾವತಿಸುತ್ತಾರೆ. ಸಮಗ್ರ ಅಭಿವೃದ್ಧಿ ಸರ್ಕಾರದ ಗುರಿಯಾಗಿರಬೇಕು. ಆಡಳಿತ ಪಕ್ಷದ ಶಾಸಕರಿಗೆ ಮಾತ್ರ ಹೆಚ್ಚಿನ ಅನುದಾನ ನೀಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕೆ.ಆರ್.ಪೇಟೆ ಜೆಡಿಎಸ್ ಶಾಸಕ ಎಚ್.ಟಿ.ಮಂಜು ಹೇಳಿದರು.

ಗುರುವಾರ ಹಾಸನಾಂಬೆ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಸರ್ಕಾರ ಅನುದಾನ ನೀಡದ ಸಂಬಂಧ ಜೆಡಿಎಸ್ ಕೋರ್ಟ್ ಮೆಟ್ಟಿಲೇರಿರುವ ವಿಚಾರ ಕುರಿತು ಮಾತನಾಡಿದ ಅವರು, ಆಡಳಿತ ಪಕ್ಷಕ್ಕೆ ಅನುದಾನ ಕೊಟ್ಟಷ್ಟು ವಿರೋಧ ಪಕ್ಷದ ಶಾಸಕರಿಗೆ ಕೊಟ್ಟಿಲ್ಲ. ವಿರೋಧ ಪಕ್ಷದ ಶಾಸಕರಿಗೆ ಕಳೆದ ಬಾರಿ ಅಲ್ಪ ಪ್ರಮಾಣದ ಗ್ರಾೃಂಟ್ ಕೊಟ್ಟರು. ಈ ಬಾರಿ ಆಡಳಿತ ಪಕ್ಷದ ಶಾಸಕರಿಗೆ ಅನುದಾನ ಕೊಟ್ಟಷ್ಟು ವಿರೋಧ ಪಕ್ಷದ ಶಾಸಕರಿಗೆ ಕೊಟ್ಟಿಲ್ಲ. ನಮ್ಮ ಪಕ್ಷದ ಹಿರಿಯ ಶಾಸಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ನಾವು ಕೂಡ ಶಾಸಕರು, ಜನಪ್ರತಿನಿಧಿಗಳಿದ್ದೇವೆ. ನಮ್ಮ ಭಾಗದ ಅಭಿವೃದ್ಧಿ ಆಗಬೇಕು. ನಮಗೂ ಸಮನಾಗಿ ಅನುದಾನ ನೀಡಿ. ಶಾಸಕರು ಕೋರ್ಟ್ ಮೆಟ್ಟಿಲೇರಿರುವುದು ನ್ಯಾಯಯುತವಾಗಿದೆ ಅದಕ್ಕೆ ನಮ್ಮ ಬೆಂಬಲವೂ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net