

ಕೊಕ್ಕರ್ಣೆ: ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ ನಿರ್ದೇಶಕ ದಯಾನಂದ ನಾಯ್ಕ ತಡಾಲು ಅವರು ಆಲಡ್ಕ ನೂಜಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 113 ವಿದ್ಯಾರ್ಥಿಗಳಿಗೆ ಕೊಡಮಾಡಿದ ಗುರುತಿನ ಚೀಟಿ ವಿತರಿಸಲಾಯಿತು.
ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನ ಅಂಜುಮ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ಕಿನ್ಮಾನ್‌ಬೆಟ್ಟು, ಉದ್ಯಮಿಗಳಾದ ಸುರೇಶ್ ಶೆಟ್ಟಿ ತಡಾಲು, ರಾಮದಾಸ ಪ್ರಭು ಆಲಡ್ಕ, ಹರೀಶ್ ಶೆಟ್ಟಿ ಕರ್ಜೆ, ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹರೀಶ್ ಶೆಟ್ಟಿ ಚೇರ್ಕಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚೇರ್ಕಾಡಿ ವಲಯಾಧ್ಯಕ್ಷ ಹರೀಶ್ ನಾಯ್ಕ ಹುಲಿಕಲ್, ಎಸ್‌ಡಿಎಂಸಿ ಅಧ್ಯಕ್ಷ ಸುರೇಂದ್ರ ನಾಯ್ಕ ನೂಜಿ, ಉಪಾಧ್ಯಕ್ಷ ಪೂರ್ಣಿಮಾ, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ಪ್ರಭು, ಶ್ರೀ ದುರ್ಗಾಪರಮೇಶ್ವರಿ ಜೋಡು ಗದ್ದುಗೆ ಅಮ್ಮನವರ ದೇವಸ್ಥಾನ ನೂಜಿ ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯ್ಕ ನೂಜಿ, ಚೇರ್ಕಾಡಿ ವಲಯ ಶೌರ್ಯ ತಂಡ ಅಧ್ಯಕ್ಷ ಸತೀಶ್ ನಾಯಕ್ ಕೊಂತ್ಯಾಳ, ಹಳೇ ವಿದ್ಯಾರ್ಥಿಗಳು, ಪಾಲಕರು, ಗ್ರಾಮಸ್ಥರು, ಶಾಲಾ ಮುಖ್ಯಶಿಕ್ಷಕ ರವಿ ಎಸ್., ಶಿಕ್ಷಕ ವೃಂದ, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.