

ಹೆಬ್ರಿ: ಮುದ್ರಾಡಿ ಶ್ರೀಗುರುರಕ್ಷಾ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಸಮುದಾಯ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿ, ಸಂಘ 5 ಕೋಟಿ ರೂ. ವ್ಯವಹಾರ ನಡೆಸಿ 1061 ಸದಸ್ಯರು ಹಾಗೂ 12.40 ಲಕ್ಷ ರೂ. ಪಾಲು ಬಂಡವಾಳ, 1.02 ಕೋಟಿ ರೂ. ಠೇವಣಿ ಹೊಂದಿದೆ. 1.03 ಕೋಟಿ ರೂ. ಸಾಲ ವಿತರಿಸಿ ವರ್ಷದ ಕೊನೆಗೆ 82.62 ಲಕ್ಷ ರೂ. ಸಾಲವು ಹೊರಬಾಕಿ ಇದೆ. ಸಂಘದ ಅಭಿವೃದ್ಧಿಗೆ ಸರ್ವರ ಸಹಕಾರ ಅಗತ್ಯ ಎಂದರು.
ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ನಾರಾಯಣ ಪೂಜಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. 2024-25ನೇ ಸಾಲಿನ ಬಜೆಟನ್ನು ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕುಮಾರ್ ಮಂಡಿಸಿದರು. ಸಂಘದಲ್ಲಿ ಅತ್ಯುತ್ತಮ ವ್ಯವಹಾರ ನಡೆಸಿದ 6 ಸದಸ್ಯರು, ಸಮಾಜ ಸೇವಕ ಶಶಿಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಸತೀಶ ಸೇರಿಗಾರ್ ವಂದಿಸಿದರು. ಸಿಬ್ಬಂದಿ ಯಶವಂತ್, ವಿದ್ಯಾ ಮತ್ತು ಹರೀಶ್ ಕುಲಾಲ್ ಸಹಕರಿಸಿದರು.