ಪರಿಹಾರ ಚೆಕ್ ವಿತರಣೆ

ಪರಿಹಾರ ಚೆಕ್ ವಿತರಣೆ
Published on

ನಾಪೋಕ್ಲು: ಇತ್ತೀಚೆಗೆ ಕಾಡಾನೆ ದಾಳಿಗೆ ಬಲಿಯಾಗಿದ್ದ ನಾಲಡಿ ಗ್ರಾಮದ ಕಂಬೆಯಂಡ ದೇವಯ್ಯ ಅವರ ಕುಟುಂಬಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಹಾರ ಚೆಕ್ ನೀಡಿದರು.

ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಹಸ್ಸೀನ್ ಬಾಷಾ, ಭಾಗಮಂಡಲ ವಲಯ ಅರಣ್ಯಾಧಿಕಾರಿ ಟಿ.ಎಂ. ರವೀಂದ್ರ, ಉಪವಲಯ ಅರಣ್ಯ ಅಧಿಕಾರಿ ಕಾಳೇಗೌಡ ರೂ.15 ಲಕ್ಷದ ಪರಿಹಾರ ಚೆಕ್ ಅನ್ನು ಮೃತ ದೇವಯ್ಯ ಅವರ ಪತ್ನಿ ನಿಳಿನಿ, ಮಗ ಅಕ್ಷಯ್‌ಗೆ ನೀಡಿದರು. ಅಲ್ಲದೆ ಮಾಸಿಕ ರೂ. 4 ಸಾವಿರ ಪಿಂಚಣಿ ನೀಡುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net