ವಿಆರ್​ಎಲ್ ಪ್ರಿಂಟಿಂಗ್ ಪ್ರೆಸ್ ಕಚೇರಿಯಲ್ಲಿ ಈ ಶ್ರಮ್ ಕಾರ್ಡ್ ನೋಂದಣಿ ಪ್ರಕ್ರಿಯೆಗೆ ಚಾಲನೆ

VRL Eshram
Published on

ಪೀಣ್ಯ ದಾಸರಹಳ್ಳಿ: ಕಾರ್ಮಿಕ ಇಲಾಖೆ ಸಹಕಾರದೊಂದಿಗೆ ವಿಜಯವಾಣಿ ದಿನಪತ್ರಿಕೆ ನಗರದ ಎಲ್ಲಾ ಪತ್ರಿಕಾ ವಿತರಕರಿಗೆ ಬುಧವಾರ ಪೀಣ್ಯ 2ನೇ ಹಂತದ ವಿಆರ್​ಎಲ್ ಪ್ರಿಂಟಿಂಗ್ ಪ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಈ ಶ್ರಮ್ ಕಾರ್ಡ್ ನೋಂದಣಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಸಾಕಷ್ಟು ಮಂದಿ ಪತ್ರಿಕಾ ವಿತರಕರು ಆಗಮಿಸಿ ಈ ಶ್ರಮ್ ಕಾರ್ಡ್​ಗೆ ನೋಂದಣಿ ಮಾಡಿಸಿಕೊಂಡರು.

ಕಾರ್ಮಿಕ ಇಲಾಖೆಯ ಹಿರಿಯ ಲೇಬರ್ ಸರ್ಕಲ್ ಅಧಿಕಾರಿ ಮಂಜುನಾಥ್ ಬಿ.ಎಚ್. ಮಾತನಾಡಿ ದಿನಪತ್ರಿಕೆ ವಿತರಕರಿಗೆ ಅಪಘಾತ ಹಾಗೂ ವೈದ್ಯಕೀಯ ಪರಿಹಾರ ವಿಮೆ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇದರ ಭಾಗವಾಗಿ ನೊಂದಣಿ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಅಂದಾಜು 45,000 ಪತ್ರಿಕ ವಿತರಕರಿಗೆ ಈ ಯೋಜನೆಯನ್ನು ಸಹಕಾರಿಯಾಗಲಿದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಕಾರ್ಮಿಕ ಅಧಿಕಾರಿ ಉಪ ವಿಭಾಗದ ಸುಜಾತ ಎಚ್ ಕೆ, ಕಾರ್ಮಿಕ ಅಧಿಕಾರಿ ಉಪ ವಿಭಾಗದ ಮಂಜುಳಾ ಎಸ್ಎಂ, ವಿಜಯವಾಣಿ ಸರ್ಕ್ಯುಲೇಷನ್ ಮ್ಯಾನೇಜರ್ ಹರೀಶ್ ಇನ್ನು ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net