ಬಾಗಿನ ಸೀರೆಗೆ ರಾಜಕೀಯದ ಬೆಂಕಿ?

Published on

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ಗೌರಿ ಗಣೇಶ ಹಬ್ಬದ ಕೊಡುಗೆಯಾಗಿ ಶಾಸಕ ಕೆ.ಎಚ್​.ಪುಟ್ಟಸ್ವಾಮಿ ಗೌಡ ವಿತರಿಸಿದ ಬಾಗಿನಕ್ಕೆ ರಾಜಕೀಯದ ಬೆಂಕಿ ಹೊತ್ತಿಕೊಂಡಿದೆ!

ಶಾಸಕ ಪುಟ್ಟಸ್ವಾಮಿ ಗೌಡ 5 ವರ್ಷದಿಂದ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ತಾಲೂಕಿನ ಎಲ್ಲ ಮಹಿಳೆಯರಿಗೆ ಸಂಸ್ಥೆ ಮೂಲಕ ಬಾಗಿನ ವಿತರಿಸುತ್ತಿದ್ದಾರೆ. ಆದೇ ರೀತಿ 2 ದಿನಗಳ ಹಿಂದೆ ತಾಲೂಕಿನ ವಾಟದಹೊಸಹಳ್ಳಿ ಭಾಗದಲ್ಲಿ ಕೂಡ ವಿತರಿಸಿದ್ದರು. ಆದರೆ ಕೆಲವು ಮಹಿಳೆಯರು ಬಾಗಿನವನ್ನು ಸ್ವೀಕರಿಸಿ ಸಾರ್ವಜನಿಕವಾಗಿ ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ.

ವಾಟದಹೊಸಹಳ್ಳಿ ಕೆರೆಯಿಂದ ನಗರಕ್ಕೆ ನೀರು ಹರಿಸುವ ಯೋಜನೆಯನ್ನು ವಿರೋಧಿಸಿ ಸೀರೆಗಳನ್ನು ಸುಟ್ಟು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಂದು ಸಂಸತಿಯಲ್ಲಿ ಬಾಗಿನಕ್ಕೆ ವಿಶೇಷ ಸ್ಥಾನಮಾನವಿದೆ. ಇಷ್ಟವಿಲ್ಲದಿದ್ದರೆ ಸ್ವೀಕರಿಸದೆ ನಿರಾಕರಿಸುವ ಮೂಲಕ ವಿರೋಧ ವ್ಯಕ್ತಪಡಿಸಬಹುದಿತ್ತು. ಆದರೆ ಸ್ವೀಕರಿಸಿ ಬೆಂಕಿ ಹಚ್ಚಿರುವುದು ಟೀಕೆಗೆ ಗ್ರಾಸವಾಗಿದೆ. ಅಲ್ಲದೆ, ಟನೆಯು ಪುಟ್ಟಸ್ವಾಮಿ ಗೌಡರ ರಾಜಕೀಯ ವಿರೋಧಿಗಳು ಉದ್ದೇಶಪೂರ್ವಕವಾಗಿ ಮಹಿಳೆಯರಿಗೆ ಕುಮ್ಮಕ್ಕು ನೀಡಿ ಈ ಕೆಲಸ ಮಾಡಿಸಿದ್ದಾರೆ ಎಂಬ ರಾಜಕೀಯ ಬಣ್ಣ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net