ನೀರಾವರಿ ಯೋಜನೆ ಪ್ರತಿ ವಸ್ತುವೂ ಅಮೂಲ್ಯ

1003845144
Published on

ಚನ್ನಪಟ್ಟಣ

ತಾಲೂಕಿನ ನೀರಾವರಿ ಯೋಜನೆಗಾಗಿ ಆಳವಡಿಸಿರುವ ಪ್ರತಿಯೊಂದು ವಸ್ತುಗಳು ಸಹ ಅಮೂಲ್ಯವಾದ ಆಸ್ತಿಗಳು. ಇವುಗಳನ್ನು ಜತನದಿಂದ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ಗುರುವಾರ ತಾಲೂಕಿನ‌ ಇಗ್ಗಲೂರು ಜಲಾಶಯದ ಬಳಿಯ ಗರಕಹಳ್ಳಿ ಪಂಪ್ ಹೌಸ್ ನಲ್ಲಿ ನಡೆಯುತ್ತಿರುವ ಯಂತ್ರಗಳ ಉನ್ನತ್ತೀಕರಣ ಕಾಮಗಾರಿ ವೀಕ್ಷಿಸಿದ ನಂತರ ಅಧಿಕಾರಿಗಳು ಹಾಗೂ ರೈತರ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಗರಕಹಳ್ಳಿ ಏತನೀರಾವರಿ ಯೋಜನೆ ಆರಂಭಗೊಂಡು ಹಲವು ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಪಂಪ್ ಹೌಸ್ ಯಂತ್ರಗಳ ಬದಲಾವಣೆ ಕಾಮಗಾರಿ ನಡೆಯುತ್ತಿರುವುದು ಒಳ್ಳೆಯದು. ನೀರಾವರಿ ಯೋಜನೆಗೆ ಇರುವ ಯಂತ್ರೋಪಕರಣಗಳು ಸೇರಿದಂತೆ ನೀರಾವರಿ ಯೋಜನೆಗೆ ಸಂಬಂಧಿಸಿದ ಎಲ್ಲವನ್ನೂ ಕಾಪಾಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳು ಸೇರಿದಂತೆ ಎಲ್ಲರ ಜವಾಬ್ದಾರಿ ಎಂದರು.

ಕಳೆದ ಬೇಸಿಗೆಯಲ್ಲೂ ಯಂತ್ರಗಳು ಕಾರ್ಯನಿರ್ವಹಿಸಿರುವ ಹಿನ್ನೆಲೆಯಲ್ಲಿ ಯಂತ್ರಗಳ ರಿಪೇರಿ ಹಾಗೂ ಉನ್ನತ್ತೀಕರಣ ಕಾಮಗಾರಿ ತಡವಾಗಿರುವುದು ವಾಸ್ತವ. ಆದರೆ, ಈ ಕಾಮಗಾರಿಯನ್ನು ಆದಷ್ಟೂ ಶೀಘ್ರವಾಗಿ ಮುಗಿಸಿ, ಮೋಟಾರ್ ಗಳಿಗೆ ಚಾಲನೆ ನೀಡಲು ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ನೀರಾವರಿ ಇಲಾಖೆಯ ಇಇ ಮೋಹನ್, ಎಇಇ‌ ಸುರೇಶ್ ಸೇರಿದಂತೆ ಹಲವರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net