ದೇವಸ್ಥಾನಕ್ಕೆ ಜಾಗ ಹಿಂದಿರುಗಿಸಿದ ಶಿಕ್ಷಕಿ : ಅಕ್ರಮ-ಸಕ್ರಮದಲ್ಲಿ ಶಿಕ್ಷಕಿಯ ಕಡತಕ್ಕೆ ವರ್ಗಾವಣೆ

Published on

ಬಂಟ್ವಾಳ: ಮೋಂತಿವಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗ ಅಕ್ರಮ ಸಕ್ರಮದ ಮೂಲಕ ಪಕ್ಕದ ಜಮೀನಿನ ಶಿಕ್ಷಕಿಯೋರ್ವರ ಕಡತಕ್ಕೆ ವರ್ಗಾವಣೆಯಾಗಿ ಈ ಬಗ್ಗೆ ಪರಿಶೀಲಿಸಿ, ಅಳತೆ ನಡೆಸಿದಾಗ ಅದು ದೇವಸ್ಥಾನಕ್ಕೆ ಸೇರಿದ ಜಮೀನೆಂದು ತಿಳಿದು ಬಂದಿತ್ತು. ಯಾವುದೇ ತಕರಾರಿಲ್ಲದೆ, ಫಲಾಪೇಕ್ಷೆ ಬಯಸದೆ ಜಾಗವನ್ನು ಮತ್ತೆ ದೇವಸ್ಥಾನಕ್ಕೆ ಹಿಂದಿರುಗಿಸಿ ಶಿಕ್ಷಕಿ ಔದಾರ್ಯ ಮೆರೆದ ಟನೆ ನಡೆದಿದೆ.

ಮೋಂತಿವಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸ್ವಾಧೀನವಿದ್ದು, ಸರಿಯಾದ ದಾಖಲೆಗಳಿಲ್ಲದೆ ರೆಕಾರ್ಡ್ ಆಗಲು ಹಲವು ಸಮಯಗಳಿಂದ ಬಾಕಿಯಾಗಿದ್ದ ದೇವಸ್ಥಾನದ ಹಿಂಭಾಗದ ತೆಂಗಿನತೋಟದಲ್ಲಿ ಅಂದಾಜು 0.37 ಎಕರೆಗೆ ರಸ್ತೆಗೆ ತಾಗಿಕೊಂಡಿದ್ದ ಜಮೀನು ದೇವಸ್ಥಾನದ ಆಡಳಿತ ಮಂಡಳಿ ಗಮನಕ್ಕೆ ಬಾರದೆ ಅಕ್ರಮ ಸಕ್ರಮ ಯೋಜನೆಯಡಿ ಪಕ್ಕದ ನಿವೃತ್ತ ಶಿಕ್ಷಕಿ ದೇವಕಿ ಟೀಚರ್ ಕಡತಕ್ಕೆ ಸೇರಿಕೊಂಡಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿ ಅಳತೆ ವಾಡಿದಾಗ ಅದು ದೇವಸ್ಥಾನಕ್ಕೆ ಸೇರಿದ್ದ ಜಮೀನು ಎಂದು ಗೊತ್ತಾಗಿದೆ. ಈ ಬಗ್ಗೆ ಶಿಕ್ಷಕಿಯ ಗಮನಕ್ಕೆ ತಂದು ವಾತುಕತೆ ನಡೆಸಿದಾಗ ದೇವಸ್ಥಾನ ಜಮೀನನ್ನು ಮರಳಿಸುವುದಾಗಿ ತಿಳಿಸಿ ಯಾವುದೇ ಫಲಾಪೇಕ್ಷೆ ಬಯಸದೆ ದೇವಸ್ಥಾನದ ಹೆಸರಿಗೆ ಕ್ರಯಪತ್ರ ವಾಡಿಕೊಟ್ಟಿದ್ದಾರೆ. ಅ.8ರಂದು ದಾಖಲೆಗಳನ್ನು ದೇವಸ್ಥಾನದ ಹೆಸರಿಗೆ ನೋಂದಾಯಿಸಿ ಕೊಟ್ಟು ಸಹಕರಿಸಿದ್ದಾರೆ. ಶಿಕ್ಷಕಿಯ ಔದಾರ್ಯಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net