ಬಸ್ಸಿನಿಂದ ಹೊರಗೆ ಬಿದ್ದ ಪ್ರಯಾಣಿಕ

Published on

ಕಡಬ: ತುಂಬಿ ತುಳುಕುತ್ತಿದ್ದ ಸರ್ಕಾರಿ ಬಸ್ಸಿನಲ್ಲಿ ಹಿಂಬದಿ ಬಾಗಿಲಲ್ಲಿ ನೇತಾಡುತ್ತಾ ಪ್ರಯಾಣಿಸುತ್ತಿದ್ದ ಪ್ರಯಾಣಿಕನೋರ್ವ ರಸ್ತೆ ತಿರುವಿನಲ್ಲಿ ರಸ್ತೆಗೆ ಎಸೆಯಲ್ಪಟ್ಟು ಪವಾಡ ಸದೃಶವಾಗಿ ಪಾರಾದ ಘಟನೆ ಮಂಗಳವಾರ ಸಂಜೆ ಕುದ್ಮಾರು ಬಳಿ ನಡೆದಿದೆ.

ಪುತ್ತೂರಿನಿಂದ ಸವಣೂರು ಮೂಲಕ ಪಂಜ ಮಾರ್ಗವಾಗಿ ಬಾಳುಗೋಡು ಪ್ರದೇಶಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಕರು ಭರ್ತಿಯಾಗಿದ್ದರು. ಹಿಂಬದಿ ಬಾಗಿಲಿನಲ್ಲಿ ನಿಂತಿದ್ದ ಕೆಎಸ್‌ಅರ್‌ಟಿಸಿ ಸಿಬ್ಬಂದಿ ಎನ್ನಲಾದ ಪ್ರಯಾಣಿಕ ಕುದ್ಮಾರು ಸಮೀಪದ ತಿರುವೊಂದರಲ್ಲಿ ರಸ್ತೆಗೆ ಎಸೆಯಲ್ಪಟ್ಟಿದ್ದು, ಸಣ್ಣ ಗಾಯದೊಂದಿಗೆ ಪಾರಾಗಿದ್ದಾರೆ.

ಬಸ್‌ನ ಹಿಂದಿನಿಂದ ಬರುತ್ತಿದ್ದ ಕಾರಿನಲ್ಲಿ ಕರ್ತವ್ಯ ನಿಮಿತ್ತ ತೆರಳಿದ್ದ ಸುಬ್ರಹ್ಮಣ್ಯ ಠಾಣೆಯ ಮಹಿಳಾ ಕಾನ್‌ಸ್ಟೆಬಲ್ ಪುನಿತಾ ಎಂಬವರು ನೆರವಿಗೆ ಧಾವಿಸಿದ್ದಾರೆ. ಬಸ್ ನಿರ್ವಾಹಕನನ್ನು ವಿಚಾರಿಸಿ ಸಮರ್ಪಕವಾಗಿ ಬಾಗಿಲು ಮುಚ್ಚುವಂತೆ ಸೂಚಿಸಿದ್ದಾರೆ. ಫುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು ಹೋಗದಂತೆ ಪ್ರಯಾಣಿಕರಿಗೂ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net