ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಜನ್ಮದಿನೋತ್ಸವ ಆಮಂತ್ರಣ ಬಿಡುಗಡೆ

Ksd_Invitation
Published on

ಕಾಸರಗೋಡು: ಶ್ರೀ ಭಿಕ್ಷು ಲಕ್ಷಣಾನಂದ ಸ್ವಾಮೀಜಿ ಜನ್ಮದಿನೋತ್ಸವ ಅಂಗವಾಗಿ ಮೇ 18ರಂದು ನಡೆಯಲಿರುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕಾಸರಗೋಡು ನಾಗರಕಟ್ಟೆ ಶ್ರೀ ಶಾರದಾಂಬಾ ಭಜನಾಶ್ರಮದಲ್ಲಿ ನಡೆಯಿತು.

ಶ್ರೀ ಭಿಕ್ಷು ಸ್ವಾಮೀಜಿ ಸೇವಾ ಸಮಾಜ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಗರಕಟ್ಟೆ, ವಿಶ್ವ ರಾಮಕ್ಷತ್ರಿಯ ಮಹಾಸಂಘ ಉಪ ಸಂಪಾದಕ ಡಾ.ವಾಮನ್ ರಾವ್ ಬೇಕಲ್ ಅವರಿಗೆ ಆಮಂತ್ರಣ ಪತ್ರಿಕೆ ಹಸ್ತಾಂತರಿಸಿದರು.

ವಿಶ್ವನಾಥ ಮಾಸ್ಟರ್ ಕೋಟೆಕಣಿ, ಪಾಂಡುರಂಗ ವಿದ್ಯಾನಗರ, ಪಾಂಡುರಂಗ ಸಿರಿಬಾಗಿಲು, ದಿವಾಕರ ಮೀಪುಗುರಿ, ಪ್ರದೀಪ್ ನಾಯ್ಕ ನಾಗರಕಟ್ಟೆ, ಮುರಳಿ ಪಾರೆಕಟ್ಟೆ, ಮೋಹನ್‌ರಾಜ್ ಕೂಡ್ಲು, ಲಲಿತಾ ಕೇಶವ್, ಪ್ರಜ್ವಲ್ ನಾಯ್ಕ, ನಗರಸಭಾ ಸದಸ್ಯೆ ರಂಜೀತ ಮೋಹನ್‌ದಾಸ್, ಗೀತಾ ಪುರುಷೋತ್ತಮ್, ಮಣಿ ಸೂರ್ಲು, ವಿನೋದ್ ನಾಗರಕಟ್ಟೆ, ಪುನೀತ್, ಮೋನಿಶ್ ಉಪಸ್ಥಿತರಿದ್ದರು. ದಿನೇಶ್ ನಾಗರಕಟ್ಟೆ ಸ್ವಾಗತಿಸಿದರು. ಪ್ರದೀಪ್ ನಾಯ್ಕ ವಂದಿಸಿದರು.

ಮೇ 18ರಂದು ಬೆಳಗ್ಗೆ ಗಣಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಿಕ್ಷು ಸಮಾಜದ ಮಕ್ಕಳಿಗೆ ಪುಸ್ತಕ ಉಚಿತ ವಿತರಣೆ ನಡೆಯಲಿರುವುದು. ಸಂಜೆ 7ಗಂಟೆಗೆ ಭಜನಾಶ್ರಮ ಸಂಘದಿಂದ ಭಜನೆ, ರಾತ್ರಿ 8ಕ್ಕೆ ಸ್ವಾಮೀಜಿ ಪಾದಪೂಜೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net