

ಮೂಡುಬಿದಿರೆ: ಕಲ್ಲಮುಂಡ್ಕೂರು ದೈಲಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅ. 26ರಂದು ನಡೆಯುವ ‘ಭಕ್ತಿದ ನಲಿಕೆ’-ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ ಆಮಂತ್ರಣ ಪತ್ರಿಕೆ ಶನಿವಾರ ಬಿಡುಗಡೆಗೊಳಿಸಲಾಯಿತು.
ದೇವಳದ ಅರ್ಚಕ ಮಂಜುನಾಥ್ ಭಟ್, ಆಡಳಿತ ಮೊಕ್ತೇಸರ ಜಯಪ್ರಕಾಶ್ ಪಡಿವಾಳ್ ಮಾಲ್ದಬೆಟ್ಟು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ಭಜನಾ ಮಂಡಳಿ ಅಧ್ಯಕ್ಷ ಕೃಷ್ಣ ಕುಲಾಲ್, ಭಜನಾ ಗುರು ಅಶೋಕ್ ನಾಯ್ಕ ಕಳಸಬೈಲ್, ಕಾರ್ಯದರ್ಶಿ ವಾಸು ನಾಯ್ಕ, ಕೆಎಫ್‌ಸಿ ಸ್ಪೋರ್ಟ್ಸ್ ಗೇಮ್ಸ್ ಕ್ಲಬ್ ಅಧ್ಯಕ್ಷ ಮೇಘನಾಥ ಕೋಟ್ಯಾನ್, ಶ್ರೀ ಮಹಮ್ಮಾಯಿ ಸೇವಾ ಭಜನಾ ಮಂಡಳಿ ಕೋಟೆಬಾಗಿಲು ಅಧ್ಯಕ್ಷ ಭಾಸ್ಕರ್ ಕುಲಾಲ್ ಹಾಗೂ ಭಜನಾ ತಂಡದ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.