ತನಿಖೆ ಮಾಡೋವರೆಗೂ ಧರಣಿ

6mkh1
Published on

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ತನಿಖೆ ನಡೆಸುವ ತನಕ ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ರೈತ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ಪ್ರಸಕ್ತ ಸಾಲಿನ ಹಾಗೂ ಬಾಕಿ ಕಬ್ಬಿನ ಬಿಲ್​ ತಣ ಬಿಡುಗಡೆ ಮಾಡುವುದು ಮತ್ತು ಕಾರ್ಖಾನೆಯಲ್ಲಿ ನಡೆದ ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ಕಳೆದೊಂದು ವಾರದಿಂದ ಕಾರ್ಖಾನೆ ಆವರಣದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ರೈತರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು ಮತ್ತು ಸಂಬಂಧಿತ ಆಡಳಿತ ಮಂಡಳಿ ತಲೆಕೆಡೆಸಿಕೊಳ್ಳುತ್ತಿಲ್ಲ. ಹೀಗಾಗಿ ಮತ್ತೆ ಹೋರಾಟ ಆರಂಭಿಸಿದ್ದೇವೆ. ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕೆಗೊಳ್ಳುವ ತನಕ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ರೆತ ಸಂದ ಮಂಡ್ಯ ಜಿಲ್ಲೆಯ ಮೇಲ್ಕೋಟೆ ಶಾಸಕ ದರ್ಶನ ಪುಟ್ಟಣ್ಣಯ್ಯ, ರಾಜ್ಯಾಧ್ಯ ಬಡಗಲ್​ ಪುರ ನಾಗೇಂದ್ರ, ಮುಖ್ಯ ಕಾರ್ಯದರ್ಶಿ ಪಿ. ಗೋಪಾಲ ವಸಂತಕುಮಾರ, ಹೊಸ ಕಾದರವಳ್ಳಿಯ ಹಜರತ್​ ತನ್ವಿರ ಮುಜಾವರ್​ ಬೆಂಬಲ ಸೂಚಿಸಿದರು.

ಹಿರಿಯ ಮುಖಂಡರಾದ ಬಸವರಾಜ ಮೊಕಾಶಿ, ಬಸನಗೌಡ ಪಾಟೀಲ, ಸುರೇಶ ವಾಲಿ, ಈರಣ್ಣ ಅಂಗಡಿ, ರುದ್ರಪ್ಪ ಕೊಡ್ಲಿ, ನಿಂಗಪ್ಪ ಹಣಜಿ, ಸುರೇಶ ಕರವಿನಕೊಪ್ಪ, ಮಹಾಂತೇಶ ಗೌರಿ, ಕಲಗೌಡ ಪಾಟೀಲ, ಸಂಜು ತಿಲಗರ, ಚನ್ನಪ್ಪ ಗಣಾಚಾರಿ, ಭಾಗ್ಯಶ್ರೀ ಹಣಬರ, ಪದಾಧಿಕಾರಿಗಳು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net