ಇನ್​ವರ್ಟರ್​, ಬ್ಯಾಟರಿ ಸದುಪಯೋಗವಾಗಲಿ

16MDLG1
Published on

ಮೂಡಲಗಿ: ಪುರಸಭೆಯಿಂದ ಎಸ್​ಸಿ, ಎಸ್​ಟಿ ಮತ್ತು ಬಡ ಕುಟುಂಬಗಳಿಗೆ ಮುಖ್ಯಮಂತ್ರಿ ಅಮತ ನಗರೋತ್ಥಾನ ಹಂತ 4ರ ಯೋಜನೆಯಡಿ ಶನಿವಾರ ಇನ್​ವರ್ಟರ್​ ಮತ್ತು ಬ್ಯಾಟರಿ ವಿತರಣಾ ಸಮಾರಂಭ ನೆರವೇರಿತು.

ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಮಾತನಾಡಿ, ಸರ್ಕಾರ ಬಡ ಕುಟುಂಬಗಳ ಸ್ವಾವಲಂಬಿ ಜೀವನಕ್ಕಾಗಿ ಅನೇಕ ಯೋಜನೆ ಜಾರಿಗೆ ತಂದಿದ್ದು, ಅದರಂತೆ ಮುಖ್ಯಮಂತ್ರಿ ಅಮತ ನಗರೋತ್ಥಾನ ಯೋಜನೆಯಡಿ ಮೂಡಲಗಿ ಪುರಸಭೆ ವ್ಯಾಪ್ತಿಯ ಸುಮಾರು 62 ಕುಟುಂಬಗಳಿಗೆ ಇನ್​ವರ್ಟರ್​ ಮತ್ತು ಬ್ಯಾಟರಿ ವಿತರಿಸಲಾಗಿದೆ. ವಿದ್ಯುತ್​ ಇಲ್ಲದ ಸಂದರ್ಭದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ರಾತ್ರಿಯ ಸಮಯದಲ್ಲಿ ದಿನನಿತ್ಯ ಕೆಲಸ ಕಾರ್ಯಗಳಿಗೆ ಇವು ಬಹಳ ಉಪಯೋಗವಾಗಲಿವೆ. ಲಾನುಭವಿಗಳು ಸದುಪಯೋಗ ಪಡೆಯಬೇಕು ಎಂದರು.

ಪುರಸಭೆ ಅಧ್ಯೆ ಖುರ್ಷಾದ ನದ್​ಾ, ಉಪಾಧ್ಯೆ ಭೀಮವ್ವ ಪೂಜೇರಿ, ಸರ್ವ ಸದಸ್ಯರು ಮತ್ತು ಪುರಸಭೆ ಸಮುದಾಯ ಅಭಿವದ್ಧಿ ಅಧಿಕಾರಿ ಸಿ.ಬಿ. ಪಾಟೀಲ, ಆರೋಗ್ಯ ನಿರೀ ಪ್ರೀತಂ ಭೋವಿ, ಕಚೇರಿ ವ್ಯವಸ್ಥಾಪಕ ಎಸ್​.ಬಿ. ಬೆಳ್ಳಿಕಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net