

ಗುರುಪುರ: ಮಂಗಳೂರು ತಾಲೂಕಿನ ಬಡಗುಳಿಪಾಡಿ ಗ್ರಾಮದ ಮಟ್ಟಿಯ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ(ಜೋಗಿ ಮಠ)ದ ಆಡಳಿತ ಮಂಡಳಿಯ ಸಹಕಾರದಲ್ಲಿ ಭಾನುವಾರ ಶ್ರೀಕ್ಷೇತ್ರ ಮಟ್ಟಿಯಲ್ಲಿ ನಾಥ ಪಂಥ ಜೋಗಿ ವಧು-ವರರ ವೇದಿಕೆಯು 3ನೇ ರಾಷ್ಟ್ರಮಟ್ಟದ ‘ವಧು-ವರರ ಪರಿಚಯ’ ಕಾರ್ಯಕ್ರಮ ಆಯೋಜಿಸಿತು.
ಶ್ರೀ ಕ್ಷೇತ್ರ ಮಟ್ಟಿಯ ಅರ್ಚಕ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ್‌ನಾಥ್ ಕದ್ರಿ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ಒಂದೇ ವೇದಿಕೆಯಲ್ಲಿ ಜೋಗಿ ಸಮಾಜದ ವಧು-ವರರ ಅನ್ವೇಷಣೆ ಅಥವಾ ಪರಿಚಯ ಮಾಡಿಕೊಳ್ಳುವ ಪ್ರಯತ್ನ ಇದಾಗಿದೆ. ಸಮಾಜದವರು ಸಂಕುಚಿತ ಭಾವನೆಯಿಂದ ಹೊರಬಂದು ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ, ನಿವೃತ್ತ ಪ್ರಾಧ್ಯಾಪಕ ಡಾ.ಗಣನಾಥ ಶೆಟ್ಟಿ ಎಕ್ಕಾರು, ಹೋಟೆಲ್ ಉದ್ಯಮಿ ಹರಿರಾವ್ ಕೈಕಂಬ, ಉದ್ಯಮಿ ಚಂದ್ರಹಾಸ ಶೆಟ್ಟಿ ನಾರಳ, ವಿಹಿಂಪ ಮಂಗಳೂರು ಅಧ್ಯಕ್ಷ ಎಚ್.ಕೆ.ಪುರುಷೋತ್ತಮ, ಗಣನಾಥ ಭಂಡಾರಿ ಮಟ್ಟಿ ಹೊಸಮನೆ, ಶ್ರೀ ಕ್ಷೇತ್ರ ಮಟ್ಟಿ ಆಡಳಿತ ಸಮಿತಿ ಕಾರ್ಯದರ್ಶಿ ಹರೀಶ್ ಮಟ್ಟಿ ಶುಭ ಕೋರಿದರು.
ಅಲೆಮಾರಿ-ಅರೆಅಲೆಮಾರಿ ಒಕ್ಕೂಟದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿಯದೊಟ್ಟು, ಶಿವಮೊಗ್ಗ ಜೋಗಿ ಸಮಾಜದ ಅಧ್ಯಕ್ಷ ತೋಟಪ್ಪ ಜೋಗಿ, ಕರ್ನಾಟಕ ಜೋಗಿ ಸಮಾಜದ ಅಧ್ಯಕ್ಷ ಕಿರಣ್ ಜೋಗಿ, ಪ್ರಗತಿಪರ ಕೃಷಿಕ ಭೋಜ ಮೇಂಡ, ಶಂಕರ್ ಜೋಗಿ ಕುಪ್ಪೆಪದವು, ವಿಶ್ವನಾಥ ಪೂಜಾರಿ ಮಟ್ಟಿ ಪಡೀಲ್, ಮಂಗಳೂರು ನಾರಾಯಣ ಗುರು ಬಿಲ್ಲವ ಸಮಾಜ ಅಧ್ಯಕ್ಷ ಕೇಶವ ಪೂಜಾರಿ ಮಟ್ಟಿ, ರತ್ನಾಕರ ಜೋಗಿ, ವಿನೋದ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀಕ್ಷೇತ್ರ ಮಟ್ಟಿಯ ಆಡಳಿತ ಮೊಕ್ತೇಸರ ಕೆ.ಗಂಗಾಧರ ಜೋಗಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ರೂವಾರಿ ಡಾ.ಪೂರ್ಣಿಮಾ ಜೋಗಿ ಸ್ವಾಗತಿಸಿದರು. ಉದ್ಯಮಿ ಸತೀಶ್ ಜೋಗಿ ಮಾಲೆಮಾರ್ ನಿರೂಪಿಸಿದರು. 100ಕ್ಕೂ ಅಧಿಕ ವಧೂವರರು ನೋಂದಣಿ ಮಾಡಿಕೊಂಡಿದ್ದರು.