ಬೇರಿಕೆ ಸಮುದ್ರ ದಡದಲ್ಲಿ ಶವ ಪತ್ತೆ

deadbody
Published on

ಕಾಸರಗೋಡು: ಉಪ್ಪಳ ಶಿರಿಯ ಸನಿಹದ ಬೇರಿಕೆ ಸಮುದ್ರ ದಡದಲ್ಲಿ ಅಂದಾಜು 50 ವರ್ಷದ ಅಪರಿಚಿತ ಪುರುಷ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿಯನ್ವಯ ಕರಾವಳಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದರು. ಸಾವು ಸಂಭವಿಸಿ ಐದು ದಿವಸ ಕಳೆದಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಗಾಗಿ ಎಲ್ಲಾ ಪೊಲೀಸ್ ಠಾಣೆಗಳಿಗೂ ಮಾಹಿತಿ ರವಾನಿಸಲಾಗಿದೆ. ಮೃತದೇಹ ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net