ಅ.17ರಂದು ಯುವಿಸಿಇ ಅತಿಥಿ ಉಪನ್ಯಾಸಕರ ಸಂದರ್ಶನ

uvce
Published on

ಬೆಂಗಳೂರು ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ (ಯುವಿಸಿಇ) ದಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅ.17ರಂದು ಸಂದರ್ಶನ ನಡೆಸುವುದಾಗಿ ತಿಳಿಸಿದೆ.

2023-24ನೇ ಸಾಲಿನ ಬಿ.ಟೆಕ್ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯ ಬೋಧಿಸುವ ಉಪನ್ಯಾಸಕರಿಗೆ ಅ.17ರಂದು ಮಧ್ಯಾಹ್ನ 2.30ಕ್ಕೆ ಯುವಿಸಿಇ ಬೋರ್ಡ್ ರೂಂ ನಲ್ಲಿ ಸಂದರ್ಶನ ನಡೆಸಲಾಗುತ್ತದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ಯುವಿಸಿಇ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net